ಸುಳ್ಯದಿಂದ ಆಲೆಟ್ಟಿಗೆ ಸಂಪರ್ಕಿಸುವ ಅಂತರ್ ರಾಜ್ಯ ರಸ್ತೆಯ ನಾಗಪಟ್ಟಣ ಸೇತುವೆಯ ದುರಸ್ತಿ ಕಾಮಗಾರಿ ಕೆಲಸ ಆರಂಭಗೊಂಡಿದೆ.
ಸುಮಾರು 1966 ರಲ್ಲಿ ನಿರ್ಮಿಸಿದ ಸೇತುವೆಯು ಇದಾಗಿದ್ದು ಶಿಥಿಲಗೊಂಡ ಹಿನ್ನೆಲೆಯಲ್ಲಿ ಸೇತುವೆಯ ಮೇಲ್ಭಾಗದಲ್ಲಿ ಕಬ್ಬಿಣದ ಸರಳುಗಳು ಕಾಣುತ್ತಿದೆ. ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ಮಳೆ ಬಂದ ಸಮಯದಲ್ಲಿ ಹೊಂಡದಲ್ಲಿ ನೀರು ತುಂಬಿದ್ದರಿಂದ ದ್ವಿಚಕ್ರ ಸವಾರರು ಹೊಂಡಕ್ಕೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ನಡೆದಿತ್ತು. ಈ ಬಗ್ಗೆ ಮಾದ್ಯಮದಲ್ಲಿ ವರದಿಗಳು ಬಿತ್ತರವಾಗಿತ್ತು.










ಈ ಭಾಗದ ನಾಗರಿಕರ ಬಹು ವರ್ಷದ ಬೇಡಿಕೆಯಾಗಿದ್ದು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿತ್ತು. ಅದರಂತೆ ವಿಶೇಷ ಅನುದಾನ ಬಿಡುಗಡೆಗೊಂಡಿದ್ದು ಶಾಸಕರ ನೇತೃತ್ವದಲ್ಲಿ ಕಳೆದ ಎರಡು ತಿಂಗಳ ಹಿಂದೆ ಗುದ್ದಲಿ ಪೂಜೆಯು ನಡೆದಿತ್ತು. ಇದೀಗ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಕೆಲಸ ಪ್ರಾರಂಭಗೊಂಡಿದೆ. ಸೇತುವೆಯ ಮೇಲ್ಭಾಗದಲ್ಲಿ ಹೊಂಡ ಮುಚ್ಚುವ ಕೆಲಸ ಕಾರ್ಯಗಳು ನಡೆಯುತ್ತಿದೆ. ಉತ್ತಮ ಗುಣಮಟ್ಟದ ಮೈಕ್ರೋ ಕಾಂಕ್ರೀಟಿಕರಣ ಮಾಡುವುದಾಗಿ ಗುತ್ತಿಗೆದಾರ ಸಂತೋಷ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.








