ಜಟ್ಟಿಪಳ್ಳ :ಹಯಾತುಲ್ ಇಸ್ಲಾಂ ಕಮಿಟಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ

0

ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಭೆ ಏ. 30 ರಂದು ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣ ಜಟ್ಟಿಪಳ್ಳದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಬಿ ಎಂ ಮುಹಮ್ಮದ್ ರವರು ವಹಿಸಿದ್ದರು.
ಪ್ರಾಸ್ಥಾವಿಕ ಭಾಷಣಮಾಡಿದ ಸ್ಥಳೀಯ ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಮೊಗರ್ಪಣೆ ಜುಮ್ಮಾ ಮಸ್ಜಿದ್ ಮುದರ್ರಿಸ್
ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲ್ ಮುದುಗುಡ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು.
ಮುಖ್ಯ ಅತಿಥಿಗಳಾಗಿ ಹಾಗೂ ಹಜ್ಜ್ ಯಾತ್ರಿಕರಾಗಿ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಖತೀಬ್ ಗಾಂಧಿನಗರ ಇವರು ಭಾಗವಹಿಸಿ ಕಮಿಟಿ ವತಿಯಿಂದ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಕಮಿಟಿ ವತಿಯಿಂದ ಸುಳ್ಯ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಜಿ ಮುಸ್ತಫ ಕೆ ಎಂ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮದರಸ ಕಮಿಟಿ ಪ್ರ. ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ಮೊಗರ್ಪಣೆ ಮಸೀದಿಗೆ ನೂತನ ಮುದರ್ರಿಸ್ ರಾಗಿ ಆಗಮಿಸಿ ರುವ ಅಬ್ದುಲ್ ಖಾದರ್ ಸಖಾಫಿ ಮುದುಗಡ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸ್ಥಳೀಯ ಮುಅಲ್ಲಿಮ್ ಸಿರಾಜ್ ಸಅದಿ ಅಲೆಕ್ಕಾಡಿ, ಗೌರವಾಧ್ಯಕ್ಷ ಅಬೂಬಕ್ಕರ್ ಜಟ್ಟಿಪಳ್ಳ,ಕೋಶಾಧಿಕಾರಿ
ಅಬ್ದುಲ್ಲಾ ಎನ್ ಎ, ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ,ಉಪಾಧ್ಯಕ್ಷರು ಹಾಜಿ ಅಬೂಬಕ್ಕರ್ ವಿ ಕೆ, ಕಾರ್ಯದರ್ಶಿ ಕಬೀರ್ ಜಟ್ಟಿ ಪಳ್ಳ, ಮಾಜಿ ಅಧ್ಯಕ್ಷ ಬಶೀರ್ ಬಾಳೆಮಕ್ಕಿ,ಮಹಮ್ಮದ್ ಆದರ್ಶ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರು ಗಳಾದ ಶಿಯಾಬ್ ಹಾಗೂ ಅಬ್ದುಲ್ ರಜ್ಜಾಕ್ ಮೊದಲಾದವರು ಸಹಕರಿಸಿದರು.