
ಇತ್ತೀಚೆಗೆ ನಿಧನರಾದ ಸಾಹಿತಿ ಜನಾರ್ಧನ ಕಣಕ್ಕೂರುರವರ ಶ್ರದ್ದಾಂಜಲಿ ಸಭೆಯು ನಿನ್ನೆ (ಎ.3೦) ಕೆವಿಜಿ ಸಮುದಾಯ ಭವನ ಅಮರಶ್ರೀಭಾಗ್‌ನಲ್ಲಿ ನಡೆಯಿತು.
ಡಾ. ಪ್ರಭಾಕರ ಶಿಶಿಲ, ವರ್ತಕ ಸಂಘದ ಅಧ್ಯಕ್ಷ ಸುಧಾಕರ ರೈ, ಕೆವಿಜಿ ಪಾಲಿಟೆಕ್ನಿಕ್ ಉದ್ಯೋಗಿ ನಾರಾಯಣರವರು ಮೃತರ ಬಗ್ಗೆ ನುಡಿನಮನಗೈದು, ಪುಷ್ಪಾರ್ಚನೆಗೈದರು. ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರವರು ಕಳುಹಿಸಿದ ಮೃತರ ನುಡಿನಮನ ಸಂದೇಶವನ್ನು ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿಯವರು ವಾಚಿಸಿದರು.









ಈ ಸಂದರ್ಭದಲ್ಲಿ ಮೃತರ ಪತ್ನಿ ನಿವೃತ್ತ ಆರೋಗ್ಯ ಸಹಾಯಕಿ ಶ್ರೀಮತಿ ಗಿರಿಜಾ, ಪುತ್ರ ಕ್ಯಾಪ್ಟನ್ ಡಾ.ಕಾರ್ತಿಕ್ ಕಣಕ್ಕೂರು, ಕೌಶಿಕ್ ಕಣಕ್ಕೂರು, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಗಳು ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಕಾರ್ಯಕ್ರಮ ನಿರೂಪಿಸಿದರು.











