ಮೇ.4 ರಂದು ನಾಯರ್ ನೇಮ









ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಾಲಾವಧಿ ಉತ್ಸವವು ಮೇ.೧ರಿಂದ ಆರಂಭಗೊಂಡು ಮೇ.೫ರ ವರೆಗೆ ನಡೆಯುವುದು.
ಮೇ.೧ರಂದು ಪೂರ್ವಾಹ್ನ ಮುಂಡೈಗೆ ಶೃಂಗಾರ ನಡೆಯುವುದು. ರಾತ್ರಿ ದೇವರ ಪೂಜೆ ನಡೆಯುವುದು. ಮೇ.೨ರಂದು ಬೆಳಗ್ಗೆ ಗಣಪತಿ ಹೋಮ, ಬಳಿಕ ಧ್ವಜಾರೋಹಣ ನಡೆಯುವುದು. ರಾತ್ರಿ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ನಡೆಯುವುದು. ಮೇ.೩ರಂದು ಬೆಳಗ್ಗೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆದು ಪ್ರಸಾದ ವಿತರಣೆ ನಡೆಯುವುದು. ಬಳಿಕ ಅನ್ನಸಂತರ್ಪಣೆ. ರಾತ್ರಿ ನಡುಬಂಡಿ ಉತ್ಸವ, ಬಳಿಕ ಸಿಡಿಮದ್ದು ಪ್ರದರ್ಶನ ನಡೆಯುವುದು. ಮೇ.೪ರಂದು ಬೆಳಗ್ಗೆ ಕಿರಿಯರ ನೇಮ, ಬೆಳಗ್ಗೆ ೯ ರಿಂದ ನಾಯರ್ ನೇಮ ನಡೆದು ಹರಕೆ ಕಾಣಿಕೆ ಸ್ವೀಕಾರ ನಡೆಯುತ್ತದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು. ರಾತ್ರಿ ೮ ರಿಂದ ಸಂಕ್ರಮಣ ಪೂಜೆ ಸಮಾರಾಧನೆ ನಡೆಯುವುದು. ಮೇ.೫ರಂದು ಬೆಳಗ್ಗೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ, ಧ್ವಜಾವರೋಹಣ, ಅಂಬುಕಾಯಿ, ಹಣ್ಣುಕಾಯಿ ನಡೆಯುವುದು.










