ಮೇ 21 ರಂದು ದೊಡ್ಡಡ್ಕ ಆದಿ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಸ್ವಾಮಿ ಕೊರಗಜ್ಜನ ಪ್ರತಿಷ್ಠಾ ನೇಮೋತ್ಸವ

0

ಸುಳ್ಯ ತಾಲೂಕಿನ ಕಾರ್ಣಿಕ ಶಕ್ತಿಯ ಗೂನಡ್ಕದ ರಾಜಾರಾಂಪುರ ದೊಡ್ಡಡ್ಕ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ನೇಮೋತ್ಸವವು ಮೇ 21 ರಂದು ವಿಜೃಂಭಣೆಯಿಂದ ನಡೆಯಲಿದೆ.

ಬೆಳಗ್ಗೆ 9 ಸ್ಥಳ ಶುದ್ಧೀಕರಣ , ವಿಶೇಷ ಪೂಜೆ, ಪ್ರತಿಷ್ಠಾ ಕಾರ್ಯಕ್ರಮ ಬಳಿಕ ದೈವಸ್ಥಾನದ ಕಾಲಾವಧಿ ಕೊರಗಜ್ಜ ಹಾಗೂ ಹದಿನೈದು ಹರಕೆ ಕೋಲ ಸೇರಿ ಒಟ್ಟು ಹದಿನಾರು ದೈವದ ಕೋಲ ನಡೆಯಲಿದೆ. ಊರ – ಪರವೂರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಅಜ್ಜನ ಕರಿಗಂಧ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯ ಮೊಕ್ತೇಸರ, ಗೌರವಾಧ್ಯಕ್ಷ , ಅಧ್ಯಕ್ಷರು , ಉಪಾಧ್ಯಕ್ಷರು , ಸರ್ವ ಸದಸ್ಯರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.