ಮಳೆಗಾಲ ಬರುವ ಮುನ್ನ ಸರಿಪಡಿಸಿಕೊಡುವಂತೆ ಸ್ಥಳೀಯರ ಮನವಿ









ಸುಳ್ಯ ನಗರ ಪಂಚಾಯತಿಗೆ ಒಳಪಟ್ಟ ಶಾಂತಿನಗರ -ಬೆಟ್ಟಂಪಾಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಮತ್ತು ಯಾವುದೇ ಚರಂಡಿ ವ್ಯವಸ್ಥೆ ಇರುವುದಿಲ್ಲ, ರಸ್ತೆಯು ತೀರಾ ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೆ ಅನಾನುಕೂಲಕರವಾಗಿದೆ. ಈ ರಸ್ತೆಯನ್ನು ಶಾಲಾ ಮಕ್ಕಳು ಸೇರಿದಂತೆ ಊರಿನವರು ಪ್ರತಿನಿತ್ಯ ಉಪಯೋಗಿಸುತ್ತಿದ್ದು, ರಸ್ತೆಯು ತೀರಾ ಹದಗೆಟ್ಟಿರುವುದರಿಂದ ಶಾಲಾ ಮಕ್ಕಳ ಸಂಚಾರಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ.

ಆದ್ದರಿಂದ ಊರಿನವರ ಹಾಗು ಶಾಲಾ ಮಕ್ಕಳ ಭದ್ರತೆ ದೃಷ್ಠಿಯಿಂದ ಹಾಗು ಸುಗಮ ಸಂಚಾರಕ್ಕಾಗಿ ಈ ರಸ್ತೆಯನ್ನು ಆಧಷ್ಟು ಬೇಗ ದುರಸ್ತಿಮಾಡಿ, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ, ಎರಡು ವಾಹನಗಳ ಸುಗಮ ಸಂಚಾರಕ್ಕೆ ತಕ್ಕಂತೆ ಅಗಲಗೊಳಿಸಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳೀಯ ನಿವಾಸಿಗಳು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.










