
ನಾಲ್ಕೂರು ಗ್ರಾಮದ ಕೊಲ್ಯ ಕುಟುಂಬಸ್ಥರ ದೈವಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಏಪ್ರಿಲ್ ೩೦ ರಿಂದ ಮೇ ೪ರವರೆಗೆ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕ್ರಮವಾಗಿ ರಕ್ತೇಶ್ವರಿ ನಾಗಚಾಮುಂಡಿ, ರುದ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಪನೆ ನಡೆದು ಮೇ ೩ರಂದು ಸಂಜೆ ದೈವಗಳ ಭಂಡಾರ ತೆಗೆದು, ರಕ್ತೇಶ್ವರಿ ದೈವದ ನೇಮೋತ್ಸವದೊಂದಿಗೆ ಪ್ರಾರಂಭವಾದ ನೇಮವು ಮೇ ೪ರಂದು ಬೆಳಿಗ್ಗೆ ಶಿರಾಡಿ ಧರ್ಮ ದೈವ ರುದ್ರ ಚಾಮುಂಡಿ ಕುಕ್ಕೆತ್ತಿಬಳ್ಳು ದೈವದ ನೇಮವು ನಡೆಯಿತು.ಸಂಜೆ ಗುಳಿಗ ದೈವದ ನೇಮ ಉತ್ಸವ ನಡೆದು ಸಮಾಪ್ತಿಗೊಳ್ಳಲಿದೆ.








ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಲೋಕಯ್ಯ ಗೌಡ. ಕುಟುಂಬದ ಹಿರಿಯರಾದ ಶ್ರೀಮತಿ ಪಾರ್ವತಿ. ತರವಾಡು ಮನೆ ಯಜಮಾನ ಗಿರಿಧರ ಗೌಡ. ಪ್ರಧಾನ ಪೂಜಾರಿಗಳಾದ ಶಶಿಧರ ಗೌಡ ಕೊಲ್ಯ ಸೇರಿದಂತೆ ಕೊಲ್ಯದ ಕುಟುಂಬಸ್ಥರು ಬಂಧುಗಳು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.(ಚಿತ್ರ ವರದಿ :ಡಿ ಹೆಚ್.)











