ಸುಳ್ಯ ನ.ಪಂ. ಕ್ರಮ ಕೈಗೊಳ್ಳುವುದೇ ?
ಸುಳ್ಯದ ರಥಬೀದಿ ರಿಕ್ಷಾ ನಿಲ್ದಾಣದ ಪಕ್ಕದ ಜಾಗದಲ್ಲಿ ಕಸದ ರಾಶಿ ರಾಶಿ ಕಟ್ಟು ಗಳಿದ್ದು, ದುರ್ವಾಸನೆ ಬೀರುತ್ತಿದೆ ಎಂದು ರಥಬೀದಿ ರಿಕ್ಷಾ ಚಾಲಕರು ದೂರಿಕೊಂಡಿದ್ದಾರೆ.









ಕಸವನ್ನು ಯಾರೋ ತಂದು ಎಸೆಯುತ್ತಿದ್ದಾರೆ. ಅದನ್ನು ನಾಯಿಗಳು ಎಳೆದಾಡುತ್ತಿದೆ. ಆ ಕಸವನ್ನು ನೋಡಿದಾಗ ಸುಳ್ಯದ ಕಾಲೇಜೊಂದಕ್ಕೆ ಬಂದಿರುವ ಪಾರ್ಸೆಲ್ ನ ವಿಳಾಸವಿರುವ ಪೊಟ್ಟಣವೂ ಇದೆ.

ಈ ಕುರಿತು ನ.ಪಂ. ಕಸ ಎಸೆದವರಾರೆಂದು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ನ.ಪಂ. ಗೂ ದೂರು ನೀಡುವುದಾಗಿ ರಿಕ್ಷಾ ಚಾಲಕರುತಿಳಿಸಿದ್ದಾರೆ.










