ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸೇನೆ ಧಾಳಿ ನಡೆಸಿರುವುದನ್ನು ಭಾರತವೇ ಸಂಭ್ರಮಾಚರಣೆ ಮಾಡುತಿದ್ಸು, ಸುಳ್ಯದಲ್ಲಿ ನಗರ ಬಿಜೆಪಿ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.









ಬೆಳಗ್ಗೆ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ತೆರಳಿರುವ ಬಿಜೆಪಿ ಪದಾಧಿಕಾರಿಗಳು ಭಾರತಕ್ಕೆ ಗರಿಷ್ಠ ಲಾಭ ಆಗುವಂತೆ, ಪಿಒಕೆ ಭಾರತದ ವಶವಾಗುವಂತೆ, ಭಯೋತ್ಪದನೆ ನಿಲ್ಲುವಂತೆ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಎ.ಟಿ. ಕುಸುಮಾಧರ, ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಮುಖರಾದ ಕಿಶೋರಿ ಶೇಟ್, ಸೋಮನಾಥ ಪೂಜಾರಿ, ಜಗನ್ನಾಥ ಜಯನಗರ, ಸುನಿಲ್ ಕೇರ್ಪಳ, ದಯಾನಂದ ಕೇರ್ಪಳ, ಪಿ.ಕೆ.ಉಮೇಶ್, ಸುಧಾಕರ ಕುರುಂಜಿಭಾಗ್, ಕೇಶವ ಸಿ.ಎ., ಬುದ್ದ ನಾಯ್ಕ್, ಚಂದ್ರಶೇಖರ ಕೇರ್ಪಳಮೊದಲಾದವರಿದ್ದರು.










