ಪಹಲ್ಗಾವ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೈನ್ಯ “ಆಪರೇಷನ್ ಸಿಂಧೂರ್ “ಹೆಸರಿನಲ್ಲಿ ಪಾಕಿಸ್ತಾನದ ಒಳನುಗ್ಗಿ ಭಯೋತ್ಪಾದಕ ನೆಲೆಗಳನ್ನು ನಾಶಮಾಡಿದ ಹಿನ್ನೆಲೆಯಲ್ಲಿ ಸಂಪಾಜೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಕೊಡಗು ಸಂಪಾಜೆಯಲ್ಲಿ ಮೇ 7 ರಂದು ಸಂಭ್ರಮಾಚರಣೆ ಮಾಡಿದರು.









ಭಾರತಮಾತೆಗೆ ದೀಪ ಬೆಳಗಿಸಿ ಜಯಘೋಷ ಮಾಡಲಾಯಿತು . ಬಳಿಕ ಮಾತನಾಡಿದ ಬಿಜೆಪಿ ನಾಯಕರಾದ ಅನಂತ್ ಊರುಬೈಲು ಕೇಂದ್ರ ಸರ್ಕಾರದ ನಿಲುವನ್ನು ಮತ್ತು ಭಾರತೀಯ ಸೈನ್ಯದ ಸಾದನೆಯನ್ನು ಶ್ಲಾಘಿಸಿ, ಪ್ರಧಾನಿ ಮೋದಿಯವರ ನಿರ್ಧಾರದ ಹಿಂದೆ ಗಟ್ಟಿಯಾಗಿ ನಿಲ್ಲಲು ಕರೆ ನೀಡಿದರು.ಗ್ರಾ.ಪಂ ಅದ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೊಡಗು ಸಂಪಾಜೆ ಬಿಜೆಪಿ ಅಧ್ಯಕ್ಷ ಉದಯ ಹನಿಯಡ್ಕ ,ಸೊಸೈಟಿ ಉಪಾಧ್ಯಕ್ಷ ಯಶವಂತ.ಡಿ ಡಿ, ಮಾಜಿ ಉಪಾಧ್ಯಕ್ಷ ರಾಜಾರಾಮ ಕಳಗಿ, ನಿರ್ದೇಶಕ ಹೊನ್ನಪ್ಪ ,ಗ್ರಾ ಪಂ ಸದಸ್ಯ ನವೀನ್ , ಸುಂದರ ಒಳಗೊಂಡಂತೆ ಬಿಜೆಪಿ ಕಾರ್ಯಕರ್ತರು,ಸಾರ್ವಜನಿಕರು ಹಾಜರಿದ್ದರು.ಕೊನೆಯಲ್ಲಿ ಸಿಹಿಹಂಚಿ , ಪಟಾಕಿ ಸಿಡಿಸಿ ಸಂಭ್ರಮಿಸಿದರು.








