ಭಕ್ತಿ ಸಂಭ್ರಮದಿಂದ ನಡೆದ ವಾರ್ಷಿಕ ಮತ್ತು ಹರಕೆ ನೇಮೋತ್ಸವ
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗಿ

ಮರ್ಕಂಜದ ಪನಿವಾರ ಕಾರಣಿಕ ಕ್ಷೇತ್ರ ಶ್ರೀ ನಾಗಸಾನಿಧ್ಯ ಮತ್ತು ಗುಳಿಗ ಸಾನಿಧ್ಯದಲ್ಲಿ ಪನಿವಾರ ಗುಳಿಗ ದೈವದ ವಾರ್ಷಿಕ ನೇಮೋತ್ಸವು ಮೇ.8ರಂದು ನಡೆಯಿತು.








ಮೇ. 8ರಂದು ಪೂರ್ವಹ್ನ ಗಣಹೋಮ ಬಳಿಕ ನಾಗತಂಬಿಲ, ಗುಳಿಗ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಬಲ್ನಾಡು ಪೇಟೆ ಬಸದಿಯಿಂದ ಭಂಡಾರ ಬಂದು ಗುಳಿಗ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.

ಮೇ. 9ರಂದು ರಾತ್ರಿ ಅಮೃತ ಕುಮಾರ್ ರೈ ಸೇವಾಜೆ ಮತ್ತು ಜನಾರ್ಧನ ನಾಯ್ಕ ಮುಂಡೋಡಿ ಯವರಿಂದ ಹರಕೆ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಊರ ಗಣ್ಯರು, ಸಮಿತಿಯ ಪದಾಧಿಕಾರಿಗಳು, ಸಾನಿಧ್ಯದ ಭಕ್ತರು ಉಪಸ್ಥಿತರಿದ್ದರು.








