ಬೆಚ್ಚಿಬಿದ್ದ ಜನತೆ









ಇಂದು ಇದೀಗ ಸುಳ್ಯ ನಗರದಲ್ಲಿ ಅಗ್ನಿಶಾಮಕ ವಾಹನದ ಜೊತೆಗೆ ಅಂಬ್ಯುಲೆನ್ಸ್ಗಳ ಸೈರನ್ ಮೊಳಗಿತು. ಕೆವಿಜಿ ಕ್ಯಾಂಪಸ್ ಕಡೆಗೆ ಸಾಲು ಸಾಲು ಅಂಬ್ಯಲೆನ್ಸ್ಗಳು ಧಾವಿಸತೊಡಗಿದವು. ಏನಿದು? ಎಲ್ಲಿ ಅಪಘಾತವಾಯಿತು? ಎಲ್ಲಿ ಬೆಂಕಿ ಬಿತ್ತು? ಜನ ಪತ್ರಿಕಾ ಕಚೇರಿಯಿಂದ ತೊಡಗಿ ಎಲ್ಲಾ ಕಡೆಗೆ ಫೋನಾಯಿಸತೊಡಗಿದರು. ಆದರೆ ಇದು ವಿಪತ್ತು ಬಂದ ಸಂದರ್ಭ ಅಗ್ನಿಶಾಮಕ ದಳದವರು ಯಾವ ರೀತಿ ಸ್ಪಂದಿಸುತ್ತಾರೆಂದು ಸಾರ್ವಜನಿಕರಿಗೆ ತಿಳಿಸಲು ಮಾಡಿದ ಅಣಕು ಕಾರ್ಯಾಚರಣೆಯಾಗಿತ್ತು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸುಳ್ಯ ಅಗ್ನಿಶಾಮಕ ಠಾಣೆ ವತಿಯಿಂದ ವಿವಿಧ ಇಲಾಖೆಯ ಸಹಯೋಗದೊಂದಿಗೆ ಅಗ್ನಿಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ಅವಘಟ ಉಂಟಾದಲ್ಲಿ ತಜ್ಷಣ ಕ್ರಮ ಕೈಗೊಳ್ಳುವ ಕುರಿತು ಅರಿವು ಮೂಡಿಸುವ ಸಲುವಾಗಿ ಮೇ. ೨೧ರಂದು ಮಧ್ಯಾಹ್ನ ೧೨ ಗಂಟೆಗೆ ಕೆವಿಜಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಅಣಕು ಕಾರ್ಯಾಚರಣೆ ನಡೆಯುತ್ತಿದೆ.
ಸುಳ್ಯದ ಜ್ಯೋತಿ ಸರ್ಕಲ್ನಿಂದ ಝೀರೋ ಟ್ರಾಫಿಕ್ನಲ್ಲಿ ಅಗ್ನಿಶಾಮಕ ವಾಹನ ಮತ್ತು ಆಂಬ್ಯುಲೆನ್ಸ್ಗಳು ಸುಳ್ಯ ಪೇಟೆಯಲ್ಲಿ ರಥಬೀದಿ ಮೂಲಕ ಕೆವಿಜಿ ಕ್ಯಾಂಪಸ್ ಕಡೆಗೆ ಹೋದವು.










