ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ

0

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ನಂತರ ಹೆಚ್ಚುವರಿ ಅಂಕಗಳನ್ನು ಪಡೆದು ಸಾಧನೆ ಮಾಡಿರುತ್ತಾರೆ

ಅಮರಮುಡ್ನೂರು ಗ್ರಾಮದ ಪಡ್ಪು ದಿನೇಶ್ ಪಿ. ಮತ್ತು ವೀಣಾ ಪಿ. ದಂಪತಿಗಳ ಪುತ್ರ ಗಗನ್ ಪಿ. 620 ಅಂಕ, ಅರಂತೋಡು ಗ್ರಾಮದ ಅಡ್ತಲೆ ಶಶಿಕುಮಾರ್ ಕೆ ಮತ್ತು ವಿಮಲಾ ಕೆ. ದಂಪತಿಗಳ ಪುತ್ರಿ ಮಹಿಕಾ ಕೆ.ಎಸ್. 620 ಅಂಕ, ಗೂನಡ್ಕದ ಗಿರಿಧರ ಮತ್ತು ರೇವತಿ ದಂಪತಿಗಳ ಪುತ್ರ ಧನುಷ್ ಬಿ.ಜಿ. 618, ಅರಮನೆ ಗುಡ್ಡೆಮನೆಯ ಸುಕೇಶ್ ಕೆ.ಜೆ. ಮತ್ತು ಭವ್ಯ ಕೆ.ಎಸ್.ದಂಪತಿಗಳ ಪುತ್ರ ತಶ್ವಿನ್ ಕೆ ಎಸ್ 606, ಮಡಪ್ಪಾಡಿ ಗ್ರಾಮದ ಗೋಳ್ಯಾಡಿ ಪದ್ಮಯ್ಯ ಜಿ ಮತ್ತು ಯಶೋಧ ದಂಪತಿಗಳ ಪುತ್ರಿ ಜನನಿ ಪಿ.ಜಿ. 584, ಪಂಬೆತ್ತಾಡಿಯ ದಿ.ಶಶಿಕುಮಾರ್ ಮತ್ತು ಕುಮುದಾಕ್ಷಿ ದಂಪತಿಗಳ ಪುತ್ರಿ ವಂಶಿ ಪಿ.ಎಸ್. 570, ಕಡಬ ತಾಲೂಕಿನ ಪುಯಿಲ ಗೋಪಾಲಕೃಷ್ಣ ಮತ್ತು ಸುಮಿತ್ರಾ ದಂಪತಿಗಳ ಪುತ್ರ ವಿನ್ಯಾಸ್ ಪಿ 566,ಗುತ್ತಿಗಾರು ಹಾಲೆಮಜಲಿನ ಅಯ್ಯಪ್ಪನ್ ಮತ್ತು ಸುಜಾತ ದಂಪತಿಗಳ ಪುತ್ರಿ ಮೈಮಾ 536 ಅಂಕ ಪಡೆದಿರುತ್ತಾರೆ.