ಕೊಡಗು ಸಂಪಾಜೆ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೇ 22 ರಂದು ಕೂಡಿ, ಮೇ 23 ರಂದು ಶಿರಾಡಿ ರಾಜನ್ ದೈವ ಮತ್ತು ಉಪದೈವಗಳ ಕಾಲಾವಧಿ ಪತ್ತನಾಜೆಯು ಹರಕೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನ ಗೊಂಡಿತು.
ಮೇ 16 ರಂದು ಗೊನೆ ಕಡಿಯುವ ಮೂಹೂರ್ತ ನಡೆಯಿತು.
ಮೇ 22 ರಂದು ಸ್ಥಳ ಶುದ್ದೀಕರಣ ಹಾಗೂ ರಾತ್ರಿ8 ಗಂಟೆಗೆ ಸಂಪಾಜೆ ದೇವಜನ ಬಾಲಕೃಷ್ಣ ಅವರ ಚಾವಡಿಯಿಂದ ಭಂಡಾರ ತರಲಾಯಿತು.ಮೇ 23 ರಂದು ಬೆಳಿಗ್ಗೆ 5 ಗಂಟೆಯಿಂದ ಬಿರ್ ಮೆರ್, ಮದಿಮಲ್, ಬಚ್ಚ ನಾಯ್ಕ, ಮೂವೆ, ಕರಿಯ ನಾಯಕ, ಗಿಳಿ ರಾಮ ಸೇರಿದಂತೆ ಆರು ಉಪದೈವಗಳ ನಡಾವಳಿ ನಡೆಯಿತು.















ಬಳಿಕ ಶಿರಾಡಿ ಶ್ರೀ ರಾಜನ್ ದೈವ, ಪುರುಷ ದೈವಗಳ ನಡಾವಳಿ ಮತ್ತು ಮಾರಿಕಳ, ಹರಕೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ, ಆಡಳಿತ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಮನೆತನದವರು, ದೈವದ ಪೂಜಾರಿಗಳು ಹಾಗೂ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.










