ಕೊಡಗಿನ ಮಾದಾಪುರ ಗ್ರಾಮದಲ್ಲಿ ತನ್ನ ತಮ್ಮನ ಮಗನ ಸಾವಿಗೆ ಹೋಗಿ ಊರಿಗೆ ಮರಳುತ್ತಿದ್ದ ವೃದ್ದ ವ್ಯಕ್ತಿ ಕಲ್ಲು ಗುಂಡಿಯಲ್ಲಿ ಹೃದಯಾಘಾತವಾಗಿ ಕಲ್ಲುಗುಂಡಿ ಲ್ಯಾಬಿಗೆ ಕರೆದೊಯ್ಯುತ್ತಿದ್ದ ವೇಳೆ ಅವರು ನಿಧನರಾದ ಘಟನೆ ಇಂದು ಸಂಜೆ ನಡೆದಿದೆ.
ಮೃತರು ಇಬ್ರಾಹಿಂ 90 ವರ್ಷ ಮೂಲತಹ ಮಾದಾಪುರ ನಿವಾಸಿ. ಆದರೆ ಕಳೆದ ಅನೇಕ ವರ್ಷಗಳಿಂದ ವಿಟ್ಲದಲ್ಲಿ ವಾಸಿಸು ತಿದ್ದರು.















ಅವರ ತಮ್ಮನ ಮಗ ಅನಾರೋಗ್ಯದಿಂದ ನಿಧನರಾಗಿದ್ದು ಮಾದಾಪುರದಲ್ಲಿ ಅಂತಿಮ ಸಂಸ್ಕಾರ ಮುಗಿಸಿ ಅವರ ಓರ್ವ ಪುತ್ರ ಅರಂತೋಡಿನಲ್ಲಿ ಇದ್ದು ಅಲ್ಲಿಗೆ ಬರುತಿದ್ದರು ಎನ್ನಲಾಗಿದೆ.
ಕೆ ಎಸ್ ಅರ್ ಟಿ ಸಿ ಎಕ್ಸ್ ಪ್ರೆಸ್ ಬಸ್ ಅರಂತೋಡು ಭಾಗದಲ್ಲಿ ನಿಲ್ಲಿಸದ ಕಾರಣ ಕಲ್ಲುಗುಂಡಿಯಲ್ಲಿ ಅವರು ಇಳಿದಿದ್ದಾರೆ. ಈ ವೇಳೆ ಅವರಿಗೆ ಹೃದಯದ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರೊಂದಿಗೆ ಇದ್ದ ಕುಟುಂಬದ ಸದಸ್ಯರು ಕಲ್ಲುಗುಂಡಿ ಯ ಲ್ಯಾಬ್ ವೊಂದಕ್ಕೆ ಕರೆದು ಕೊಂಡು ಬರುವ ವೇಳೆ ಅವರು ನಿಧನರಾಗಿದ್ದಾರೆ.
ಮೃತರು ಪತ್ನಿ ಆಸಿಯಮ್ಮ, ಪುತ್ರರಾದ ಹಸೈನಾರ್ (ಸೂಫಿ) ಅಬ್ಬಾಸ್, ಪುತ್ರಿಯರಾದ ಖದೀಜ, ಸುಬೈದ, ನೆಬೀಸಾ , ಪಾತುಮ್ಮ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










