ಸುಳ್ಯದಲ್ಲಿ ಗೌರಿ ಬ್ರೈಡಲ್ ಝೋನ್, ಶಾಲೂಸ್ ಮೇಕಪ್ & ಹೇರ್ ಅಕಾಡೆಮಿ ಶುಭಾರಂಭ

ಅತಿಥಿಗಣ್ಯರಿಗೆ ಗೌರವಾರ್ಪಣೆ, ಗಿಡ ವಿತರಣೆ

0

ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ತರಬೇತಿ ಮತ್ತು ಸರ್ಟಿಫಿಕೇಟ್ ಪಡೆಯುವ ಸುವರ್ಣಾವಕಾಶ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ಎದುರುಗಡೆಯ ಸಿ. ಎ ಬ್ಯಾಂಕ್ ಬಿಲ್ಡಿಂಗ್ ನಲ್ಲಿ ಶಾಲಿನಿ ಮಾಲಿಕತ್ವದ ನೂತನ ಗೌರಿ ಬ್ರೈಡಲ್ ಶಾಲೂಸ್ ಮೇಕಪ್ & ಹೇರ್ ಅಕಾಡೆಮಿ ಜೂ .13 ರಂದು ಶುಭಾರಂಭಗೊಂಡಿತು.

ಕಲ್ಲುಗುಂಡಿ ಪ್ರಭಾಕರ್ ಭಟ್ ಗಣಪತಿ ಪೂಜೆ ಮತ್ತು ಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು. ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿ , ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ ದೀಪಬೆಳಗಿಸಿ ಉದ್ಘಾಟಿಸಿ , ಸುಳ್ಯ ಸಿ. ಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ಶುಭ ಹಾರೈಸಿದರು. ಬಳಿಕ ಅತಿಥಿಗಳಿಗೆ ಗೌರವಾರ್ಪಣೆ ಹಾಗೂ ಗಿಡ ವಿತರಣೆ ನಡೆಯಿತು. ಸಂದರ್ಭದಲ್ಲಿ ಅತಿಥಿಗಳಾಗಿ ಮoಗಳೂರು ಎಜುಕೇಟರ್ ಲಶ್ ಮೇಕಪ್ & ಹೇರ್ ಅಕಾಡೆಮಿಯ ನಿರೀಕ್ಷಾ, ರಾಜು ಪಂಡಿತ್ , ಸಿ . ಎ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಾಹಕ ಧಿಕಾರಿ ಸುದರ್ಶನ , ಪಿ. ಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸೋಮನಾಥ್ ಪೂಜಾರಿ, ಹೇಮಂತ್ ಕಂದಡ್ಕ, ಲಕ್ಷ್ಮೀ ಜ್ಯುಲರ್ಸ್ ನ ಮಾಲೀಕ ಪ್ರಶಾಂತ್ ಆಚಾರ್ಯ ಕಾಯರ್ತೋಡಿ , ಇಂಟಲಿಜೆನ್ಸ್ ಅಧಿಕಾರಿ ರಾಜೇಶ್, ಮಾಲಕರ ತಂದೆ ರಾಮಮಣಿಯಾಣಿ, ಅಮ್ಮ ಶ್ರೀಮತಿ ನೀಲಮ್ಮ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲೀಕ ಶಾಲಿನಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.

ನಮ್ಮಲ್ಲಿ ಬ್ರೈಡಲ್ ಮೇಕಪ್, ನೋನ್ ಬ್ರೈಡಲ್ ಮೇಕಪ್, ಎಂಗೇಜ್ಮೆಂಟ್ , ರೀಸೆಪ್ಷನ್ , ಪಾರ್ಟಿ, ಬೇಬಿ ಶೋವರ್ , ಮೆಹಂದಿ ಡಿಸೈನ್, ಹಾಗೂ ಮಹಿಳೆಯರಿಗೆ ತರಬೇತಿ & ಸರ್ಟಿಫಿಕೇಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.