ಎಸ್ ಎಸ್ ಎಲ್ ಸಿ ಯಲ್ಲಿ ಶೇ.90.9ಕ್ಕೆ ಏರಿದ ಫಲಿತಾಂಶ
ಜೂ.13 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ -2 ಫಲಿತಾಂಶ ಪ್ರಕಟವಾಗಿದ್ದು ಎಲಿಮಲೆ ಸರಕಾರಿ ಪ್ರೌಢಶಾಲೆಯ 5 ವಿದ್ಯಾರ್ಥಿಗಳು ತೇರ್ಗಡೆ ಯಾಗುವುದರೊಂದಿಗೆ ಶಾಲಾ ಫಲಿತಾಂಶ 90.9ಕ್ಕೆ ಏರಿಕೆಯಾಗಿದೆ.















ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 77 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ತೇರ್ಗಡೆಯಾಗಿ 12 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡು, ಶೇ 84.4 ಫಲಿತಾಂಶ ದಾಖಲಾಗಿತ್ತು. ಇದೀಗ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶದಲ್ಲಿ 5 ವಿದ್ಯಾರ್ಥಿಗಳು ತೇರ್ಗಡೆ ಯಾಗುವುದರೊಂದಿಗೆ ಫಲಿತಾಂಶ ಶೇ. 90.9 ಕ್ಕೆ ಏರಿಕೆಯಾಗಿದೆ.










