ಸವಣೂರಿನ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಬೆಳ್ಳಾರೆ ಪೊಲೀಸರಿಂದ ದಾಳಿ

0

ಯಂತ್ರ ಸೇರಿದಂತೆ ಸಾಗಾಣಿಕೆಗೆ ಇಟ್ಟಿದ್ದ ಎರಡು ಲಾರಿ ವಶ- ಪ್ರಕರಣ ದಾಖಲು

ಅಕ್ರಮವಾಗಿ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಆರೋಪದಡಿ ಬೆಳ್ಳಾರೆ ಪೊಲೀಸರು ಕೆಂಪು ಕಲ್ಲು ಗಣಿಗಾರಿಕಾ ಸ್ಥಳಕ್ಕೆ ದಾಳಿ ಮಾಡಿ ಎರಡು ಲಾರಿಗಳು, ಕಲ್ಲು ಸೈಜ್ ಮಾಡುವ ಯಂತ್ರ, ಹಾಗೂ ಆರೋಪಿ ಸುಲೈಮಾನ್ ಅನ್ಯಾಡಿ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಜೂ. ೧೫ ರಂದು ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಎಸ್ ಐ ಈರಯ್ಯ ದೂಂತೂರು ರವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರ ಜೊತೆಯಲ್ಲಿ ಮಾಹಿತಿ ಬಂದ ಸ್ಥಳವಾದ ಕಡಬ ತಾಲೂಕು ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿಗೆ ರಾತ್ರಿ ೭.೩೦ ಗಂಟೆಗೆ ತಲುಪಿದಾಗ ಪೊಲೀಸ್ ಜೀಪನ್ನು ನೋಡಿ ಸ್ಥಳದಲ್ಲಿದ್ದ ಲಾರಿಯೊಂದರಿಂದ ಅನ್ಯಾಡಿಯ ಸುಲೈಮಾನ್ ಎಂಬವನು ಇಳಿದು ಓಡಿ ಹೋಗಿರುತ್ತಾನೆ ಎನ್ನಲಾಗಿದೆ.

ಬಳಿಕ ಪೊಲೀಸರು ಲಾರಿಯ ಬಳಿಗೆ ತೆರಳಿ ಪರಿಶೀಲಿಸಲಾಗಿ ಲಾರಿಯಲ್ಲಿ ಕೆಂಪು ಕಲ್ಲನ್ನು ತುಂಬಿಸಿಟ್ಟಿರುವುದು ಕಂಡುಬಂದಿದ್ದು ಲಾರಿಯ ನಂಬ್ರ ಏಂ ೨೧ ಂ ೪೧೫೦ ಆಗಿರುತ್ತದೆ.ಅಲ್ಲದೆ ಸ್ಥಳದಿಂದ ಸ್ವಲ್ಲ ದೂರದಲ್ಲಿ ನಿಂತಿದ್ದ ಇನ್ನೊಂದು ಲಾರಿಯಲ್ಲಿ ಕೂಡಾ ಕೆಂಪು ಕಲ್ಲನ್ನು ತುಂಬಿಸಿಟ್ಟಿರುವುದು ಕಂಡು ಬಂದಿದ್ದು ಆ ಲಾರಿಯ ನಂಬ್ರ ಏಐ ೫೭ ಃ ೩೩೧೪ ಆಗಿರುತ್ತದೆ.ಸ್ವಲ್ಪ ದೂರದಲ್ಲಿ ಅಲ್ಲಿ ಯಂತ್ರದ ಮೂಲಕ ಕೆಂಪು ಕಲ್ಲನ್ನು ಸೈಜು ಗಳನ್ನಾಗಿ ಕತ್ತರಿಸಿರುವುದು ಕಂಡುಬಂದಿದ್ದು, ಕಲ್ಲನ್ನು ಕತ್ತರಿಸುವ ಯಂತ್ರ ಕೂಡಾ ಸ್ಥಳದಲ್ಲಿಯೇ ಇರುವುದು ಕಂಡು ಬಂದಿರುತ್ತದೆ.
ಈ ಕೂಡಲೇ ಘಟನೆಗೆ ಸಂಬಂಧಿಸಿದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಪರವಾನಿಗೆ ಪಡೆಯದೆ ಅಕ್ರಮವಾಗಿ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಆರೋಪ ದಡಿ ಆರೋಪಿಗಳ ವಿರುದ್ಧ ಕಲಂ:೪೨, ೪೩, ೪೪, ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ ೧೯೯೪,ಮತ್ತು ಕಲಂ:೪(೧),೪(೧ಎ),೨೧(೧),(೧ಎ) ಎಮ್, ಎಮ್, ಆರ್, ಡಿ, ೧೯೫೭ ಮತ್ತು ಕಲಂ:೩೦೩(೨),ಬಿ. ಎನ್. ಎಸ್. ೨೦೨೩ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದಿನ ಕ್ರಮ ಕೈ ಗೊಂಡಿದ್ದಾರೆ.