ಅಲೆಟ್ಟಿಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಮಂತ್ರಿ ಮಂಡಲ ರಚನೆಯು ಜೂ. 11ರಂದು ರಚನೆಯಾಯಿತು.
ಶಾಲಾ ವಿದ್ಯಾರ್ಥಿಗಳು ಗುಪ್ತ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.















2025-26ನೇ ಸಾಲಿನ ನೂತನ ಮುಖ್ಯಮಂತ್ರಿಯಾಗಿ ಕುಲದೀಪ್ ಡಿ.ಎನ್, ಉಪಮುಖ್ಯಮಂತ್ರಿಯಾಗಿ ನವ್ಯಶ್ರೀ ಎಂ. ಎನ್, ವಿದ್ಯಾಮಂತ್ರಿ ಮೇಘ. ಎ, ಕ್ರೀಡಾಮಂತ್ರಿ ರತನ್, ಗೃಹಮಂತ್ರಿ ಪವನ್, ಸಾಂಸ್ಕೃತಿಕ ಮಂತ್ರಿ ಲಿಖಿತ್.ಎಂ, ಅರೋಗ್ಯ ಮಂತ್ರಿ ನಿಶ್ಮಿತ್, ಕೃಷಿ ಮಂತ್ರಿ ಧನ್ವಿತ್, ವಿರೋಧ ಪಕ್ಷದ ನಾಯಕ ಹರ್ಷ, ವಿರೋಧ ಪಕ್ಷದ ನಾಯಕಿ ಅಕ್ಷತಾ. ಸಿ. ವಿ, ಗ್ರಂಥಾಲಯ ಮಂತ್ರಿ ಕುಶಾಂತ್. ಕೆ, ವಾರ್ತಾ ಮಂತ್ರಿ ದಕ್ಷಾ. ಕೆ. ಎ ಇವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ ಎಂ ಹಾಗೂ ಸಹಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










