ಹರೀಶ್ ರೈ ಉಬರಡ್ಕ ಮಾಲಕತ್ವದಲ್ಲಿ ಮತ್ತು ಯದುಕುಮಾರ್ ಅಮೈ ಮಿತ್ತೂರುರವರ ಸಹಭಾಗಿತ್ವದಲ್ಲಿ “ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್” ಸುಳ್ಯದ ನೀರಬಿದಿರೆಯಲ್ಲಿ ಜೂ. 12 ರಂದು ಶುಭಾರಂಭಗೊಂಡಿತು.
ಶ್ರೀಮತಿ ಲೀಲಾವತಿ ನಾರಾಯಣ ರೈ ಉಬರಡ್ಕ ಮತ್ತು ಶ್ರೀಮತಿ ಲಲಿತ ನಾಗಪ್ಪ ಮಿತ್ತೂರುರವರು ದೀಪ ಪ್ರಜ್ವಲಿಸಿ ಮಿಲ್ ನ್ನು ಉದ್ಘಾಟಿಸಿದರು.
















ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿಯ ದ. ಕ. ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಉಬರಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಮಂಡಲ ಬಿಜೆಪಿ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದಿನ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಟಿಂಬರ್ ಮರ್ಚೆಂಟ್ ಎಸೋಸಿಯೇಷನ್ ಅಧ್ಯಕ್ಷ ಫಾರೂಕ್ ಸಂಟ್ಯಾರ್, ಆರಂಬೂರಿನ ಕರ್ನಾಟಕ ಪ್ಲೈ ವುಡ್ ಮಾಲಕ ಕೃಷ್ಣ ಕಾಮತ್, ಹಳೆಗೇಟಿನ ಮಿಲ್ ಮಾಲಕ ಸಮದ್, ಡೆಲ್ಮಾ ಎಂಟರ್ ಪ್ರೈಸಸ್ ಮಾಲಕ ಅಜೀಜ್ ಕಾವು ಸೇರಿದಂತೆ ಹಿತೈಷಿಗಳು, ಬಂಧುಮಿತ್ರರು ಆಗಮಿಸಿ ಶುಭ ಹಾರೈಸಿದರು.










