














ಒಂದೇ ಠಾಣೆಯಲ್ಲಿ 5ವರ್ಷ ಸೇವೆ ಸಲ್ಲಿಸಿದ ಪೊಲೀಸರನ್ನು ವರ್ಗಾವಣೆ ಮಾಡುವ ನಿಯಮ ಪ್ರಕಾರ ಸುಳ್ಯ ಠಾಣೆಯಿಂದ ಓರ್ವ ಹೆಡ್ ಕಾನ್ಸ್ಟೇಬಲ್ ಮತ್ತು 4 ಮಂದಿ ಪೊಲೀಸ್ ಸಿಬ್ಬಂದಿಗಳು ಬೇರೆ ಠಾಣೆಗಳಿಗೆ ವರ್ಗಾವಣೆ ಗೊಂಡಿರುವ ಹಿನ್ನೆಲೆ ಯಲ್ಲಿ ಸುಳ್ಯ ಠಾಣೆಗೆ ನೂತನ ವಾಗಿ ಇಬ್ಬರು ಹೆಡ್ ಕಾನ್ಸ್ಟೇಬಲ್ ಹಾಗೂ 4 ಮಂದಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ವಿಟ್ಲ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದ ಸತೀಶ ಕೆ ರವರು ಮುಂಬಡ್ತಿ ಗೊಂಡು ಹೆಡ್ ಕಾನ್ಸ್ಟೇಬಲ್ ಆಗಿ ಸುಳ್ಯಕ್ಕೆ ಬಂದಿದ್ದು ಕಡಬ ಠಾಣೆಯಲ್ಲಿ ಕರ್ತವ್ಯ ದಲ್ಲಿ ದ್ದ ಹೆಡ್ ಕಾನ್ಸ್ಟೇಬಲ್ ರಮೇಶ್ ಲಂಬಾಣಿ, ಕಡಬ ಠಾಣೆಯಲ್ಲಿ ಪಿ ಸಿ ಯಾಗಿದ್ದ ಸೋಮಯ್ಯ ಈರೇಮಠ್, ಸುಬ್ರಹ್ಮಣ್ಯ ಠಾಣೆಯಲ್ಲಿ ಪಿ ಸಿ ಯಾಗಿದ್ದ ಆಕಾಶ್, ಪುತ್ತೂರು ನಗರ ಠಾಣೆಯಲ್ಲಿ ಪಿ ಸಿ ಗಳಾಗದ್ದ ಶಶಿಕುಮಾರ್ ಮತ್ತು ರವಿಕುಮಾರ್ ರವರು ಸುಳ್ಯ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.










