ಅರಂಬೂರು ಧರ್ಮಾರಣ್ಯ ಎಂಬಲ್ಲಿ ಕಳೆದ ತಡರಾತ್ರಿ ಸಮಯದಲ್ಲಿ ಕಾಡಾನೆಗಳು ಬಂದು ಕೃಷಿ ಬೆಳೆಗಳನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.















ಕಳೆದ ಕೆಲ ದಿನಗಳಿಂದ ಅರಂಬೂರು ಪರಿಸರದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ರಾತ್ರಿಯಾಗುತ್ತಲೆ ಆನೆಗಳ ಹಿಂಡು ಕಾಡಿನಿಂದ ಇಳಿದು ಬಂದು ರಾಜರೋಷವಾಗಿ ರಸ್ತೆ ದಾಟಿ ಕೃಷಿ ತೋಟಗಳಿಗೆ ನುಗ್ಗಿ ಸಿಕ್ಕ ಸಿಕ್ಕ ಕೃಷಿ ಬೆಳೆಗಳನ್ನು ಧ್ವಂಸ ಮಾಡುತ್ತಿದೆ. ಇದೇ ರೀತಿ ಮುಂದುವರಿದರೆ ಕಷ್ಟ ಪಟ್ಟು ಬೆಳೆಸಿದ ಬೆಳೆಗಳನ್ನು ಕಾಪಾಡುವ ಬಗೆ ಹೇಗೆ ಎಂಬ ಬಗ್ಗೆ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ.










