ಸುಬ್ರಹ್ಮಣ್ಯ ರೋಟರಿ ವತಿಯಿಂದ ಬ್ಯಾಂಕ್ ಪ್ರಬಂಧಕರಿಗೆ ಸನ್ಮಾನ

0


ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಆಗಿ ಎರಡು ಅವಧಿಯಲ್ಲಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ವರ್ಗಾವಣೆಗೊಂಡ ರೊ. ವಿಶೃತ್ ಕುಮಾರ್ ಅವರನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಇಂದು ಬುಧವಾರ ಸಂಜೆ ಬ್ಯಾಂಕಿನ ವಠಾರದಲ್ಲಿ ಸನ್ಮಾನಿಸಲಾಯಿತು.


ಸನ್ಮಾನಕ್ಕೆ ಉತ್ತರಿಸಿದ ವಿಶ್ರುತ್ ಕುಮಾರ್ ಅವರು ಎರಡು ಬಾರಿ ಬ್ಯಾಂಕಿನ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸುವ ಸುಯೋಗ ಒದಗಿದೆ. ಇಲ್ಲಿ ಗ್ರಾಹಕರು ನಮ್ಮನ್ನು ಬಹಳ ಆತ್ಮೀಯತೆಯಿಂದ ವ್ಯವಹರಿಸುತಿದ್ದರು,ಅಲ್ಲದೆ ಎಲ್ಲಾ ಸಹಕಾರವನ್ನು ಕೂಡ ನೀಡುತ್ತಿದ್ದರು. ಹಾಗೆಯೇ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಸದಸ್ಯರಾಗಿ ಎಲ್ಲರೊಂದಿಗೆ ಸೇರಿಕೊಂಡು ಸೇವೆಯನ್ನು ಸಲ್ಲಿಸ್ತಕಂತ ಭಾಗ್ಯ ಕೂಡ ನನಗೆ ದೊರಕಿದೆ. ಆ ನಿಟ್ಟಿನಲ್ಲಿ ನಾನು ರೋಟರಿ ಕ್ಲಬ್ಬಿಗೆ ಆಭಾರಿಯಾಗಿದ್ದೇನೆ ಎಂದು ನುಡಿದರು.


ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ರೋಟರಿ ಜೋನಲ್ ಲ್ಯಾಪ್ಟಿನೆಂಟ್ ವಿಶ್ವನಾಥ ನಡುತೋಟ, ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳಾದ ಗೋಪಾಲ ಎಣ್ಣೆ ಮಜಲ್ ಭರತ್ ನೆಕ್ರಾಜ್, ಡಾl ರವಿ ಕಕ್ಕೆಪದವ್ ಮಾಯಿಲಪ್ಪ ಸಂಕೇಶ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್, ಪುಟ್ಟ ವಲಗದಕೇರಿ, ಬ್ಯಾಂಕಿನ ನೂತನ ಪ್ರಬಂಧ ಕೃಷ್ಣಪ್ರಸಾದ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.