ಸುಂದರ ಭಾರತ್ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ಮುರುಳ್ಯ ಸ.ಹಿ.ಪ್ರಾ.ಶಾಲೆಗೆ ಉಚಿತ ನೋಟು ಪುಸ್ತಕಗಳ ವಿತರಣೆ

0

ಸುಂದರ ಭಾರತ್ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ಸರಕಾರಿ ಶಾಲೆಗಳಿಗೆ ಒದಗಿಸಿದ ಉಚಿತ ನೋಟು ಪುಸ್ತಕಗಳ ವಿತರಣಾ ಕಾರ್ಯಕ್ರಮ ಜೂ.19ರಂದು ನಡೆಯಿತು .
ಎಸ್. ಡಿ. ಎಂ.ಸಿ ಅಧ್ಯಕ್ಷ ಅವಿನಾಶ್ ಡಿ ಶಾಲಾ ಮಕ್ಕಳಿಗೆ ಉಚಿತ ನೋಟು ಪುಸ್ತಕವನ್ನು ವಿತರಿಸಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಕೊಡುಗೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿ ಎಂದು ಹಾರೈಸಿ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಕೆ, ಸದಸ್ಯರುಗಳಾದ ಶರತ್ ಕುಮಾರ್, ಶ್ರೀಮತಿ ರಂಜಿನಿ, ಶ್ರೀಮತಿ ಪ್ರಿಯಾ, ಶ್ರೀಮತಿ ಲಲಿತ , ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಶಾಲಾ ಮಕ್ಕಳಿಗೆ ಒಟ್ಟು 760 ನೋಟು ಪುಸ್ತಕಗಳನ್ನು ವಿತರಿಸಲಾಯಿತು .
ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿ ,ಶಿಕ್ಷಕಿ ಮಿಥುನಾ ವಂದಿಸಿದರು.