ಹೆಡ್ ಕಾನ್‌ಸ್ಟೇಬಲ್ ರವೀಂದ್ರರಿಗೆ ಎ.ಎಸ್.ಐ. ಯಾಗಿ ಭಡ್ತಿ-ವರ್ಗ

0


ವೇಣೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಸುಳ್ಯದ ಜಾಲ್ಸೂರು ಗ್ರಾಮದ ಎರ್ಮೆಕಾರ್ ನಿವಾಸಿ ಈಗ ಬೆಳ್ತಂಗಡಿಯ ಗುರುವಾಯನಕೆರೆ ಹಳೆಕೋಟೆಯಲ್ಲಿ ವಾಸ್ತವ್ಯವಿರುವ ರವೀಂದ್ರ ಎಂ. ರವರು ಎ.ಎಸ್.ಐ. ಯಾಗಿ ಭಡ್ತಿಯಾಗಿ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಜಾಲ್ಸೂರು ಗ್ರಾಮದ ಎರ್ಮೆಕಾರ್ ದಿ| ಚಂದು ನಾಯರ್ ಮತ್ತು ದಿ| ಶ್ರೀಮತಿ ಕಾರ್ತ್ಯಾಯಿನಿ ದಂಪತಿಗಳ ಪುತ್ರ.
1996 ನೇ ನವೆಂಬರ್‌ನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಇವರು ಮಂಗಳೂರು ಟ್ರಾಫಿಕ್, ವೇಣೂರು, ಉಪ್ಪಿನಂಗಡಿ, ಧರ್ಮಸ್ಥಳ ಠಾಣೆಗಳಲ್ಲಿ ಒಟ್ಟು 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಎ.ಎಸ್.ಐ.ಯಾಗಿ ಭಡ್ತಿಗೊಂಡು ಬಂಟ್ವಾಳ ನಗರ ಠಾಣೆಗೆ ವಗಾವಣೆಗೊಂಡಿರುತ್ತಾರೆ.
ಇವರ ಪತ್ನಿ ಶ್ರೀಮತಿ ಪ್ರೀತಿ ಗೃಹಿಣಿಯಾಗಿದ್ದು, ಪುತ್ರಿ ಕು| ಪ್ರಾಪ್ತಿ ಎಕ್ಸೆಲ್ ಕಾಲೇಜು ಗುರುವಾಯನಕೆರೆಯಲ್ಲಿ ಪಿಯುಸಿ ಹಾಗೂ ಇನ್ನೋರ್ವ ಪುತ್ರಿ ಕು| ಆದ್ಯ ಲಾಲದ ಸೈಂಟ್ ಮೇರೀಸ್ ಸ್ಕೂಲ್‌ನಲ್ಲಿ ೮ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.