ಗಾಂಧಿನಗರ ಕೆಪಿಎಸ್ : ವಿದ್ಯಾರ್ಥಿ ಸಂಘ

0

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಶಾಲೆ ಯಲ್ಲಿ ಶಾಲಾ ಸಂಸತ್ ಚುನಾವಣೆ ಜೂ.20ರಂದು ನಡೆಯಿತು.

ಇ ವಿ ಎಮ್ ಮೊಬೈಲ್ ಆಪ್ ಮೂಲಕ ಮಾದರಿ ಮತದಾನ ನಡೆಸಲಾಯಿತು. ಶಾಲಾ ಮುಖ್ಯ ಮಂತ್ರಿ ಯಾಗಿ ಅಬ್ದುಲ್ ನಾಫಿ 10ನೇ ತರಗತಿ, ಉಪ ಮುಖ್ಯ ಮಂತ್ರಿ ಯಾಗಿ ಜೀನತ್ ಫಾತಿಮ 9ನೇ ತರಗತಿ ಇವರು ಆಯ್ಕೆ ಯಾದರು.

ಕ್ರೀಡಾ ಮಂತ್ರಿಯಾಗಿ ಅಬುತಾಹಿರ್, ಗೃಹ ಮಂತ್ರಿಯಾಗಿ ಆಯಿಷಾತ್ ಆಫಿಯ, ಅರೋಗ್ಯ ಮಂತ್ರಿಯಾಗಿ ಮಹಮ್ಮದ್ ಆದಿಲ್, ವಾರ್ತಾ ಮಂತ್ರಿಯಾಗಿ ಆಯಿಷತ್ ಸಫುವಾನ ಆಯ್ಕೆ ಯಾದರು.ಎಲ್ಲಾ ಶಿಕ್ಷಕರು ಚುನಾವಣೆ ಯಲ್ಲಿ ಭಾಗವಹಿಸಿದರು. ವಿದ್ಯಾರ್ಥಿ ಗಳಿಗೆ ಚುನಾವಣೆ ಪ್ರಾತ್ಯಕ್ಷಿಕೆ ದೊರೆಯಿತು.