ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿ ಕಚೇರಿ ಹೊಂದಿರುವ ರಚನ್ ಮಹಿಳಾ ಸ್ವ ಅಭಿವೃದ್ಧಿ ಅಸಹಾಯಕರ ಸಂಘದಿಂದ ಸಾರ್ವಜನಿಕ ಅಸಹಾಯಕರು, ಮಹಿಳೆಯರು, ಹಿರಿಯ ನಾಗರೀಕರು,ವಿಕಲಚೇತನರು ಬುದ್ಧಿಮಾಂದ್ಯರು ಹಾಗೂ ಇತರ ಎಲ್ಲಾ ರೀತಿಯ ಆಶಕ್ತ ನಾಗರಿಕರಿಗೆ ವಿವಿಧ ಸೇವಾ ಸೌಲಭ್ಯಗಳು ಲಭ್ಯವಿದೆ.









ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳ ಪಡೆಯಲು, ವಿದ್ಯಾಭ್ಯಾಸ ಕುರಿತಂತೆ, ಬ್ಯಾಂಕ್ ವ್ಯವಹಾರಗಳಿಗೆ ದಾಖಲೆಗಳು ಪಿಂಚಣಿ ಸೌಲಭ್ಯಗಳ ಕುರಿತಾಗಿ ಅಲ್ಲದೇ, ಪಡಿತರ ಚೀಟಿ, ಆಧಾರ್ ಗುರುತಿನ ಚೀಟಿ ಪಾನ್ ಕಾರ್ಡ್, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ, ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳ ದೌರ್ಜನ್ಯ ಸಂಬಂಧಿಸಿದಂತೆ ಸಂಸ್ಥೆಯು ತಮ್ಮ ಪ್ರತಿನಿಧಿಯಾಗಿ ನ್ಯಾಯಯುತವಾಗಿ ನಿಷ್ಪಕ್ಷಪಾತವಾಗಿ ಸಹಕಾರವನ್ನು ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ (9741340521) ಕಚೇರಿಯನ್ನು ಸಂಪರ್ಕಿಸಬಹುದು.



