Home ಅಪಘಾತ ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಅಪಘಾತ

ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಅಪಘಾತ

0

ಸಂಪಾಜೆಯ ಕಾರು ಜಖಂ – ಅಪಾಯದಿಂದ ಪಾರು

ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಬಸ್ಸೊಂದು ಲಾರಿ ಮತ್ತು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ಬಿದ್ದ ಹಾಗೂ ಕಾರು ಜಖಂಗೊಂಡ ಘಟನೆ ವರದಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಜಖಂಗೊಂಡಿದ್ದು, ಕಾರಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖಾಸಗಿ ಬಸ್ಸೊಂದು ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಬರುತ್ತಿದ್ದಾಗ ಕಲ್‌ಬೆಟ್ಟ ಕಡೆಯಿಂದ ಬಂದ ಲಾರಿ ರಸ್ತೆಗೆ ಅಡ್ಡವಾಗಿ ಬಂದು ನಿಂತಿತೆಂದೂ, ಬಸ್ ಚಾಲಕ ಬಸ್ಸನ್ನು ನಿಯಂತ್ರಿಸಲಾಗದೆ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಯಿತೆಂದೂ, ಆ ಸಂದರ್ಭ ಸಂಪಾಜೆಯ ಉದಯಕುಮಾರ್ ಕುಕ್ಕೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಪಕ್ಕದಲ್ಲಿ ಬರುತ್ತಿದ್ದು, ಬಸ್ ಕಾರಿನ ಮೇಲೆ ಉರುಳಿತೆಂದೂ ತಿಳಿದು ಬಂದಿದೆ. ಅಪಘಾತದಲ್ಲಿ ಬಸ್ಸಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ ಉದಯಕುಮಾರ್ ಕುಕ್ಕೆಟ್ಟಿ ಮತ್ತು ಕುಟುಂಬಿಕರಿಗೆ ಅದೃಷ್ಟವಶಾತ್ ಗಾಯಗಳಾಗಿಲ್ಲ. ಆದರೆ ಕಾರು ಜಖಂಗೊಂಡಿದೆ.

NO COMMENTS

error: Content is protected !!
Breaking