
ಜಾಲ್ಸೂರುಗ್ರಾಮದ ವಿನೋಬಾನಗರದಲ್ಲಿರುವ ವಿವೇಕಾನಂದ ವಿದ್ಯಾ ಸಂಸ್ಥೆ ಇಲ್ಲಿನ ಆಡಳಿತ ಮಂಡಳಿಯ ನಿಕಟ ಪೂರ್ವ ಸಂಚಾಲಕರು ಪ್ರಸ್ತುತ ಕೋಶಾಧಿಕಾರಿಯೂ, ಉದ್ಯಮಿ ಯು ಆಗಿರುವ ಶ್ರೀ ಗಣೇಶ್ ಗೇರು ಬೀಜ ಕಾರ್ಖನೆಯ ಮಾಲಕರಾದ ಸುಧಾಕರ ಕಾಮತ್ ಇವರ 60 ನೇ ಹುಟ್ಟುಹಬ್ಬದ ಪ್ರಯುಕ್ತ 635 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ
ಬ್ಯಾಗ್ ಗಳನ್ನು ಕೊಡುಗೆಯಾಗಿ ನೀಡಿದರು.















ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ನ. ಸೀತಾರಾಮ್, ಸಂಚಾಲಕರಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು,
ಶ್ರೀಮತಿ ಶುಭ ಸುಧಾಕರ ಕಾಮತ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜಯಪ್ರಸಾದ್ ಕಾರಿಂಜ, ಪ್ರೌಢ ಶಾಲಾ ಮುಖ್ಯಶಿಕ್ಷಕರಾದ ಗಿರೀಶ್ ಕುಮಾರ್ ಇವರು ಸ್ವಾಗತಿಸಿ ವಂದಿಸಿದರು.










