ಸುಳ್ಯ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

0

ಜಾಗೃತಿ ಫಲಕ ಪ್ರದರ್ಶನ ದೊಂದಿಗೆ ಸುಳ್ಯ ಮುಖ್ಯ ರಸ್ತೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ಉಪ ವಿಭಾಗ, ಸುಳ್ಯ ವೃತ್ತ ಕಚೇರಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಜೂ.26 ರಂದು ಸುಳ್ಯ ನಗರ ಮುಖ್ಯ ರಸ್ತೆ ಯಲ್ಲಿ ಜಾಗೃತಿ ಕಾಲ್ನಡಿಗೆ ಜಾಥಾದೊಂದಿಗೆ ನಡೆಯಿತು.

ಸುಳ್ಯ ವೃತ್ತ ಕಚೇರಿಯ ಅಧಿಕಾರಿಗಳು ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಹಾಗೂ ವಿವಿಧ ಸಂಘ ಸಂಸ್ಥೆಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಸುಳ್ಯ ಜ್ಯೋತಿ ಸರ್ಕಲ್ ನಿಂದ ಗಾಂಧಿನಗರದವರೆಗೆ ಬೃಹತ್ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ರ‍್ಯಾಲಿ ನಡೆದು ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ ವಿ ದಾಮೋಧರ ಗೌಡರು ಉದ್ಘಾಟಿಸಿ ಚಾಲನೆ ನೀಡಿದರು.

ಸುಳ್ಯದ ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸಿ ಮಾದಕ ದ್ರವ್ಯ ವಿರೋಧಿ ಫಲಕಗಳನ್ನು ಪ್ರದರ್ಶಿಸಿ ದಿನಾಚರಣೆಯಲ್ಲಿ ಭಾಗವಹಿಸಿದ್ದರು.ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ವೇತವರ್ಣದ ಉಡುಪುಗಳನ್ನು ಧರಿಸಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಸುಳ್ಯ ರೋಟರಿ ಸಂಸ್ಥೆ, ಪ್ರೆಸ್ ಕ್ಲಬ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಕೆವಿಜಿ ಶಿಕ್ಷಣ ಸಂಸ್ಥೆ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಬೆಳ್ಳಾರೆ ಎಸ್ ಐ ಈರಯ್ಯ ದೂಂತೂರು, ಸುಬ್ರಹ್ಮಣ್ಯ ಎಸ್ ಐ ಕಾರ್ತಿಕ್, ಸುಳ್ಯ ಅಪರಾಧ ವಿಭಾಗದ ಎಸ್ ಐ ಸರಸ್ವತಿ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ, ಮುಖ್ಯ ಅಧಿಕಾರಿ ಸುಧಾಕರ್ ಎಂ ಎಚ್, ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ, ಅಧ್ಯಕ್ಷ ಶರೀಫ್ ಜಟ್ಟಿಪಳ್ಳ,ಕೆವಿಜಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಹಾಗೂ ಮುಖಂಡರುಗಳಾದ ಹಮೀದ್ ಕುತ್ತಮೊಟ್ಟೆ,ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಕೆ ಎಸ್ ಉಮ್ಮರ್, ಸಾಮಾಜಿಕ ಕಾರ್ಯಕರ್ತ ಡಿ ಎಮ್ ಶಾರಿಕ್, ಕುಸುಮಾಧರ ಕೆ ಟಿ, ಎಂ ಚೆನ್ನಕೇಶವ ಜಾಲ್ಸೂರು, ಮೊದಲಾದವರು ಭಾಗವಹಿಸಿದ್ದರು.

ಸುಳ್ಯ ಎಸ್ ಐ ಸಂತೋಷ್ ಸ್ವಾಗತಿಸಿ ವಂದಿಸಿದರು.