ವಾಹನಗಳು ಜಖಂ, ಪ್ರಯಾಣಿಕರು ಅಪಾಯದಿಂದ ಪಾರು
ಮಾಣಿ ಮೈಸೂರು ಹೆದ್ದಾರಿ ಮಡಿಕೇರಿ ದೇವರ ಕೊಲ್ಲಿ ಬಳಿ ಕೆಎಸ್ಆರ್‌ಟಿಸಿ ಬಸ್ಸು ಹಾಗೂ ಕಾರಿನ ನಡುವೆ ಜೂ. 26 ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಡಿಕ್ಕಿ ಸಂಭವಿಸಿದೆ.
















ಮೈಸೂರು ನಿಂದ ಮಂಗಳೂರು ಹೋಗುತ್ತಿದ್ದ ಬಸ್ಸು ಮತ್ತು ಮಂಗಳೂರು ನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಕಾರು ಪರಸ್ಪರ ಡಿಕ್ಕಿ ಆಗಿದ್ದು ಘಟನೆಯಿಂದ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂ ಗೊಂಡಿದೆ.
ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲಾ ಎಂದು ತಿಳಿದು ಬಂದಿದೆ.










