







ಊರುಬೈಲು ಮುದಾರ್ಪಳ್ಳ ಮಾರ್ಪಡ್ಕ ಕುಟುಂಬದ ವತಿಯಿಂದ ಪೊಲೀಸ್ ಇಲಾಖೆಯಿಂದ ನಿವೃತ್ತಿಗೊಂಡ ಶ್ರೀಧರ ದುಗ್ಗಳ ಕಲ್ಲುಗುಂಡಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಪಡೆದ ಸಂಜನಾ ಎಂ.ಎಸ್. ರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುದರ್ಪಳ್ಳ ಮಾರ್ಪಡ್ಕ ಕುಟುಂಬಸ್ಥರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು. ಕುಟುಂಬದ ಹಿರಿಯರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಚರಣ್ ಮಾರ್ಪಡ್ಕ ಕಾರ್ಯಕ್ರಮ ನಿರೂಪಿಸಿದರು.










