ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನ ಸಭೆಯನ್ನು ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ನಾರಾಯಣ ಕಳಂಜ ರವರ ಅಧ್ಯಕ್ಷತೆಯಲ್ಲಿ ಜೂನ್ 27 ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಸಲಾಯಿತು.
ಈ ಸಭೆಯನ್ನು ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕ,ರವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು.








ಸಭೆಯಲ್ಲಿ ಸುಳ್ಯ ತಾಲೂಕಿನ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತನಾಡುತ್ತ, ಭಜನಾ ಪರಿಷತ್ ನ ಉದ್ದೇಶ, ಸ್ಥಳೀಯ ಭಜನಾ ಮಂಡಳಿಗಳ ಬಲಪಡಿಸುವಿಕೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಸಮಾಜಮುಖಿ ಸೇವೆಗಳಲ್ಲಿ ಭಜನಾ ಮಂಡಳಿಗಳ ಹಾಗೂ ಭಜನಾ ಪರಿಷತ್ ನ ಪಾತ್ರದ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶ T N ಸತೀಶ್, , ಬೆಳ್ಳಾರೆ ಒಕ್ಕೂಟಗಳ ವಲಯ ಅಧ್ಯಕ್ಷರಾದ ಶ್ರೀಮತಿ ವೇದಾ ಶೆಟ್ಟಿ , ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಪದಾಧಿಕಾರಿಗಳ ಸಮಿತಿ ರಚನೆಯನ್ನು ಮಾಡಲಾಯಿತು.ಭಜನಾ ಪರಿಷತ್ ನ ವಲಯದ ನೂತನ ಅಧ್ಯಕ್ಷರಾಗಿ ಶ್ರೀಮತಿ ಸವಿತ ಪೆರುವಾಜೆವಲಯ ಉಪಾಧ್ಯಕ್ಷರಾಗಿ ಗಂಗಾಧರ ತೋಟದಮೂಲೆ, ವಲಯ ಕಾರ್ಯದರ್ಶಿಯವರಾಗಿ ಶ್ರೀಮತಿ ಸುನಿತಾ M ಪೆರುವಾಜೆಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಜ್ಯೋತಿ ಮಿತ್ತಮೂಲೆ ಕೋಶಾಧಿಕಾರಿಯಾಗಿ ಶ್ರೀಮತಿ ಪೂರ್ಣಿಮ ಭಟ್ ಕಲ್ಪಡಹಾಗೂ ವಲಯ ಭಜನಾ ಪರಿಷತ್ ಸದಸ್ಯರಾಗಿ ವಿಜಯ ಚಂದ್ರ ಬಾಚೋಡಿ: ಶ್ರೀಮತಿ ಹೇಮಾವತಿ ತಂಟೆಪಾಡಿ: ಹಾಗೂ ಶ್ರೀಮತಿ ಪೂರ್ಣಿಮ ಪೆರುವಾಜೆ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ಸೇವಾಪ್ರತಿನಿಧಿಯವರು ಭಾಗವಹಿಸಿದರು.ಈ ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ತೀರ್ಥರಮರವರು ನಿರೂಪಣೆ, ಮಾಡಿ ಸ್ವಾಗತಿಸಿ, ಐವರನಾಡು ಸೇವಾದಾರರಾದ ಶ್ರೀಮತಿ ಮೀನಾಕ್ಷಿ ಧನ್ಯವಾದ ಅರ್ಪಿಸಿದರು.










