ಚೆನ್ನೈನ ಪ್ರತಿಷ್ಠಿತ ಯಮಹ ಕಂಪೆನಿಯ ಉತ್ಪಾದನಾ ಘಟಕದಲ್ಲಿ ಉದ್ಯೋಗಿಯಾಗಿರುವ ರೋಹಿತ್ ಪಾನತ್ತಿಲರವರು ವರ್ಗಾವಣೆ ನಿಮಿತ್ತ ಕರ್ತವ್ಯ ನಿರ್ವಹಿಸಲು ಜಪಾನ್ ದೇಶದ ಇವಟಕ್ಕೆ ಜೂ. 29ರಂದು ಪ್ರಯಾಣ ಬೆಳೆಸಿದ್ದಾರೆ.















ಇವರು ಉಬರಡ್ಕ ಮಿತ್ತೂರು ಗ್ರಾಮದ ನಿವೃತ್ತ ಸೈನಿಕ ಎಲ್ಯಣ್ಣ ಗೌಡ ಪಾನತ್ತಿಲ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಎ.ಜಿ. ಭವಾನಿಯವರ ಪುತ್ರರಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಪಂಚಮಿ, ಚೆನ್ನೈನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.










