ವಾಹನ ಸವಾರರಿಗೆ ಸಂಚರಿಸಲು ಸವಾಲಿನ ಪರಿಸ್ಥಿತಿ
ಸ್ಥಳೀಯರಿಂದ ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ಜಯನಗರ 3 ಮತ್ತು 19 ನೇ ವಾರ್ಡಿನ ಜನತೆ ತಮ್ಮ ವಾರ್ಡಿಗೆ ಸಂಚರಿಸುವ ಮುಖ್ಯ ರಸ್ತೆಯ ಅವ್ಯವಸ್ಥೆಯಿಂದಾಗಿ ಆಕ್ರೋಶ ಗೊಂಡಿದ್ದಾರೆ.

ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಯಾರಲ್ಲಿ ? ಎಂಬ ಪ್ರಶ್ನೆಯ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಹಲವಾರು ತಿಂಗಳುಗಳಿಂದ ಈ ಭಾಗದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ಇದೀಗ ಮಳೆ ಬಂದಿರುವ ಕಾರಣ ಮತ್ತು ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಮಾಡಿರುವ ಗುಂಡಿ ಗಳಿಂದಾಗಿ ರಸ್ತೆ ಹದಗೆಟ್ಟು ಹೋಗಿದೆ.ಈ ಬಗ್ಗೆ ಅನೇಕ ಭಾರಿ ಸಂಬಂಧಪಟ್ಟರ ಬಳಿ ಹೇಳಿ ಕೊಂಡಿದ್ದರು ಮತ್ತು ಅಲ್ಲಿಯ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ದಿನಾಲು ಸಂಚರಿಸುತ್ತಿದ್ದರೂ ರಸ್ತೆ ದುರಸ್ಥಿ ಬಗ್ಗೆ ಯಾವುದೇ ಕ್ರಮ ಕೈ ಗೊಳ್ಳುತ್ತಿಲ್ಲ. ಆದ್ದರಿಂದ ಮುಂದಿನ ದಿನದಲ್ಲಿ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕೆಲವು ದ್ವಿ ಚಕ್ರ ಸವಾರರು ಇಲ್ಲಿ ಬಿದ್ದು ಗಾಯಗೊಂಡ ಘಟನೆಗಳು ಕೂಡ ಇತ್ತೀಚೆಗೆ ನಡೆದಿದೆ ಎಂದು ತಿಳಿದು ಬಂದಿದೆ.