
ಮುರುಳ್ಯ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿ ಬಸ್ ನಿಲ್ದಾಣ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಕಸ, ಪ್ಲಾಸ್ಟಿಕ್ ಬಾಟಲಿ, ಪೊದೆಗಳು, ಮಳೆ ನೀರು ತುಂಬಿದೆ. ಇಲ್ಲಿ ಬಸ್ಸಿಗೆ ಕಾಯುವವರು ರಸ್ತೆಯಲ್ಲಿ ನಿಲ್ಲುವುದು ಮಾಮೂಲಾಗಿದೆ. ಬಸ್ ನಿಲ್ದಾನದಲ್ಲಿ ಬಸ್ ನಿಲ್ಲಿಸಿ ಎಂದರೆ ತುಂಬಾ ದೂರ ಹೋಗಿ ನಿಲ್ಲಿಸುತ್ತಾರೆ.












ಅನಾರೋಗ್ಯ ಪೀಡಿತರು, ವೃದ್ದರೂ ಸೇರಿದಂತೆ ಎಲ್ಲರೂ ಬಸ್ಸಿಗಾಗಿ ನೂರು ಮೀಟರ್‌ನಷ್ಟು ಓಡಬೇಕಾದ ಪರಿಸ್ಥಿತಿ. ತಡ ಆದರೆ ಬಸ್ ಸಿಬ್ಬಂದಿಯಿಂದ ಬೈಗಳು ತಪ್ಪಿದ್ದಲ್ಲ. ನಿಲ್ದಾಣದಲ್ಲಿ ಬಸ್ ಕಾಯುವವರು ರಸ್ತೆಯಲ್ಲಿ ಮಳೆ ಬಿಸಿಲಿಗೂ ತಲೆ ಒಡ್ಡಬೇಕು, ಕೆಲವೊಂದು ಬಸ್‌ಗಳು ಬಾರ್& ರೆಸ್ಟೋರೆಂಟ್ ಬಳಿ ಹೋಗಿ ನಿಲ್ಲುವುದೂ ಇದೆ. ವಿದ್ಯಾರ್ಥಿಗಳಿಗೂ ಇದರಿಂದ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕೆಂದು ಆ ಭಾಗದವರು ಆಗ್ರಹಿಸಿದ್ದಾರೆ.










