ಅಂಜನಾದ್ರಿಪ್ರಸನ್ನಾಂಜನೇಯ ಕ್ಷೇತ್ರದಲ್ಲಿ 48 ಗಂಟೆಗಳ ಕಾಲ ಅಖಂಡ ಭಜನಾ ಸಂಕೀರ್ತನೆ

0

ಜಾಲ್ಸೂರು ವಲಯದ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆಯಲ್ಲಿ ನಿರ್ಧಾರ

ಅಡ್ಕಾರ್ ಅಂಜನಾದ್ರಿ
ಶ್ರೀ ಪ್ರಸನ್ನಾಂಜನೇಯ ಕ್ಷೇತ್ರದಲ್ಲಿ ಪುನ: ಪ್ರತಿಷ್ಠಾ ಮಹೋತ್ಸವದಸಂದರ್ಭದಲ್ಲಿ 48 ಗಂಟೆಗಳ ಕಾಲ ನಿರಂತರ ಅಖಂಡ ಭಜನಾ ಸಂಕೀರ್ತನೆಯನ್ನು ಹಮ್ಮಿಕೊಳ್ಳುವ ಬಗ್ಗೆ ಅಡ್ಕಾರ್ ಅಂಜನಾದ್ರಿ ಕ್ಷೇತ್ರದ ವಠಾರದಲ್ಲಿ ಡಿ. 14 ರಂದು ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯದ ತ್ರೈಮಾಸಿಕ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಜಾಲ್ಸೂರು ವಲಯದ ಪರಿಷತ್ ಅಧ್ಯಕ್ಷ ಜಯರಾಮ ವಿನೋಬನಗರ ರವರು ವಹಿಸಿದ್ದರು.

ಕ್ಷೇತ್ರದ ತಂತ್ರಿಯವರಾದ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ್ ನಾಗರಾಜ್ ಭಟ್ ರವರು ಮಹೋತ್ಸವದ ಸಮಯದಲ್ಲಿ ನಡೆಯಲಿರುವ ವೈದಿಕ ತಾಂತ್ರಿಕ ವಿಧಿ ವಿಧಾನಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾರ್ಚ್ ತಿಂಗಳ 7 ರಿಂದ 9 ರ ತನಕ ತಾಲೂಕಿನ ಮತ್ತು ಜಿಲ್ಲೆಯ ಭಜನಾ ತಂಡಗಳನ್ನು ಆಹ್ವಾನಿಸಿ ನಿರಂತರ 48 ಗಂಟೆಗಳ ಕಾಲ ಭಜನಾ ಸಂಕೀರ್ತನೆಯನ್ನು ನಡೆಸುವ ಕುರಿತು ವಿಚಾರ ಪ್ರಸ್ತಾಪಿಸಲಾಯಿತು.
ಎಲ್ಲರ ಒಮ್ಮತದ ಅಭಿಪ್ರಾಯದಂತೆ ಅಖಂಡ ಭಜನೋತ್ಸವದ ಸಿದ್ಧತೆಗಾಗಿ ಸಮಿತಿ ರಚಿಸಿ ನಿರ್ವಹಣೆ ಯ ಜವಬ್ದಾರಿ ವಹಿಸಿಕೊಡುವ ಬಗ್ಗೆ ನಿರ್ಧರಿಸಲಾಯಿತು.

ಜಾಲ್ಸೂರು ರಾಘವೇಂದ್ರ
ಭ. ಮಂದಿರದ ಅಧ್ಯಕ್ಷರಾದ ಜಯರಾಮ್ ರೈ ಜಾಲ್ಸೂರು,
ಯೋಜನಾಧಿಕಾರಿ ಮಾಧವ ಗೌಡ, ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರು ಅಖಂಡ ಭಜನೆಯ ಪೂರ್ವಭಾವಿ ಸಿದ್ಧತೆಯ ವಿಷಯದ ಕುರಿತು ಸಲಹೆ ನೀಡಿದರು.
ಸಮಿತಿಯ ಸದಸ್ಯರಾದ ಭಾಸ್ಕರ ಅಡ್ಕಾರ್, ವಿವೇಕ್ ರೈ ಅಡ್ಕಾರ್, ನಾರಾಯಣ ಕೋಡ್ತುಗುಳಿ, ದಯಾನಂದ ಕೊರತ್ತೋಡಿ, ನವೀನ್ ಅಡ್ಕಾರ್,ಸತೀಶ್ ಅಡೂರು, ನಾಗೇಶ್ ಅಡ್ಕಾರ್, ಜಯಂತಗೌಡ, ಸುನಿಲ್ ಅಡ್ಕಾರ್, ಸತೀಶ ಪೂಜಾರಿ, ವಿಜಯ, ಆಕಾಶ್, ಶಾಂತಕುಮಾರಿ, ಕುಸುಮ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.
ಪರಿಷತ್ ಕಾರ್ಯದರ್ಶಿ ಸತೀಶ್ ಟಿ. ಎನ್
ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿ, ನವೀನ್ ವಂದಿಸಿದರು. ಸ್ಥಳೀಯ ಭಜಕರು ಭಾಗವಹಿಸಿದರು.