ಬಿದ್ದು ಸಿಕ್ಕಿದ ಮೊಬೈಲ್, ನಗದನ್ನು ವಾರೀಸುದಾರರಿಗೆ ಹಸ್ತಾಂತರಿಸಿದ ಕೃಷ್ಣ ರಾವ್ ಕಳಂಜ

0

ಕಳಂಜದ ಎಸ್. ಕೃಷ್ಣ ರಾವ್ ಎಂಬವರಿಗೆ ಬಿದ್ದು ಸಿಕ್ಕಿದ ಮೊಬೈಲ್ ಮತ್ತು ನಗದನ್ನು ವಾರೀಸುದಾರರಿಗೆ ಒಪ್ಪಿಸಿದ ಘಟನೆ ಡಿ. 14ರಂದು ನಡೆದಿದೆ.
ಡಿ. 13ರಂದು ಯೇನೆಕಲ್ಲು ಬಳಿಕ ಎಸ್. ಕೃಷ್ಣರಾವ್ ಕಳಂಜ ಎಂಬವರಿಗೆ ಮೊಬೈಲ್ ಫೋನ್ ‌ಮತ್ತು ನಗದು ಬಿದ್ದು ಸಿಕ್ಕಿತ್ತು. ಈ ವಿಷಯವನ್ನು ಬೆಳ್ಳಾರೆ ಪೋಲಿಸ್ ಠಾಣೆಗೆ ತಿಳಿಸಿದ ಕೃಷ್ಣರಾವ್ ರವರು ವಾರೀಸುದಾರರಾದ ಉಷಾ ಎಂಬವರನ್ನು ಠಾಣೆಗೆ ಕರೆಸಿ ಮೊಬೈಲ್‌ಫೋನ್ ಮತ್ತು ನಗದು ರೂ. 2055/- ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.