








ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ 2025, 75 ದಿನಗಳ ಸ್ವಚ್ಚತಾ ಅಭಿಯಾನದ ಅಂಗವಾಗಿ ಡಿ.14 ರಂದು ಕೂತ್ಕುಂಜ ಗ್ರಾಮದ ಕುದ್ವ ಬಸ್ಸು ತಂಗುದಾಣದ ಸ್ವಚ್ಛತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಹಿತೇಶ್ ಪಂಜದಬೈಲು, ಪಂಜ ಗ್ರಾಮ ಪಂಚಾಯತ್ ನ ಸದಸ್ಯರಾದ ಚಂದ್ರಶೇಖರ ದೇರಾಜೆ ಮತ್ತು ಶರತ್ ಕುದ್ವ ಹಾಗೂ ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು.











