









.ಜೇಸಿಐ ಭಾರತದ ಪ್ರತಿಷ್ಠಿತ ವಲಯ 15 ರ ಪದಪ್ರದಾನ ಕಾರ್ಯಕ್ರಮವು ಡಿ.13 ರಂದು ಜೇಸಿಐ ವಿಟ್ಲ ಆತಿಥ್ಯದಲ್ಲಿ ಸೆಂಟಿನರಿ ಮೆಮೋರಿಯಲ್ ಹಾಲ್ ವಿಟ್ಲದಲ್ಲಿ ನಡೆಯಿತು. ಜೇಸಿಐ ಪಂಜ ಪಂಚಶ್ರೀ ಯ ಪೂರ್ವಾದ್ಯಕ್ಷರಾದ JFD ಲೋಕೇಶ್ ಆಕ್ರಿಕಟ್ಟೆ ಇವರು ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ವಿಭಾಗದ ವಲಯಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಯನ್ನೊಳಗೊಂಡ ಸುಮಾರು 80 ಘಟಕಗಳಿಗೆ ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಈ ಮೊದಲು ಜೇಸಿಐ ಭಾರತ ವಲಯ 15ರಲ್ಲಿ G&D ಫೌಂಡೇಶನ್ ಹಾಗೂ ಸ್ಸ್ಕಾಲರ್ಷಿಪ್ ಅಂಡ್ ವಾಯ್ಸ್ ಆಫ್ ಯೂತ್ ವಿಭಾಗದಲ್ಲಿ ವಲಯಾಧಿಕಾರಿಯಾಗಿ ಉತ್ತಮ ಕೆಲಸ ಕಾರ್ಯವನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.ಇವರು ವಿಟ್ಲ ದಲ್ಲಿ ನಡೆದ ವಲಯಾಡಳಿತ ಮಂಡಳಿಯ ಪದಪ್ರದಾನ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ HGF ವಾಚಣ್ಣ ಕೆರೆಮೂಲೆ, ನಿಯೋಜಿತ ಅಧ್ಯಕ್ಷ JFM ದೇವಿಪ್ರಸಾದ್ ಚಿಕ್ಮುಳಿ, ಪೂರ್ವಾಧ್ಯಕ್ಷ JFP ಚೇತನ್ ತಂಟೆಪ್ಪಾಡಿ, ಉಪಾಧ್ಯಕ್ಷ JFMಜೀವನ್ ಶೆಟ್ಟಿಗದ್ದೆ, ಖಜಾಂಜಿ JFMಗಗನ್ ತೆಂಕಪ್ಪಾಡಿ, ಜೇಸಿರೆಟ್ ಪ್ರೇಮಲತಾಲೋಕೇಶ್, ಮಾಸ್ಟರ್ ಚಿನ್ಮಯ್ ಲೋಕೇಶ್, ಮಾಸ್ಟರ್ ಚಿರಂತ್ ಲೋಕೇಶ್, ಮಾಸ್ಟರ್ ದೇವಿ ಹಾರ್ದಿಕ್ ಚಿಕ್ಮುಳಿ ಮುಂತಾದವರು ಉಪಸ್ಥಿತರಿದ್ದರು.










