














ನಿವೃತ್ತ ದೈ.ಶಿ.ಶಿಕ್ಷಕ ಭಾಸ್ಕರ ರೈ ಕೇನ್ಯ ಹೊಸಮನೆ ಅಸೌಖ್ಯದಿಂದ ಇಂದು (ಜೂ. 30) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ರಾಜಕುಮಾರಿ, ಪುತ್ರ ಅಭಿಷೇಕ್ ರೈ, ಪುತ್ರಿ ಶ್ರೀಮತಿ ತೀರ್ಥ ರೈ, ಸಹೋದರ ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ವಿಮಲಾ ರೈ ಹೊಸಮನೆ, ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಕುಸುಮಾ ಎಸ್ ರೈ, ಸಹೋದರ ಪ್ರಭಾಕರ ರೈ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










