ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಜು.1 ರಂದು ನಡೆಯಿತು.
ಬ್ಯಾಂಡ್ ಸೆಟ್ ಮೂಲಕ ನೂತನ ಮಂತ್ರಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಡಾ. ಅಶ್ವಿನ್ ಎಲ್ ಶೆಟ್ಟಿ ದೀಪ ಪ್ರಜ್ವಲನೆ ಮೂಲಕ ವಿದ್ಯಾರ್ಥಿ ಸರಕಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡುತ್ತಾ “ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸುವುದರ ಜೊತೆಗೆ, ಕಲಿಕೆಯನ್ನು ಜೀವನದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು” ಎಂದರು.















ಕಾರ್ಯಕ್ರಮವು 9ನೇ ತರಗತಿ ವಿದ್ಯಾರ್ಥಿನಿಯರ ಪ್ರಾರ್ಥನೆ ಮೂಲಕ ಆರಂಭಗೊಂಡಿತು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರು ಆಯ್ಕೆಯಾದ ನೂತನ ಶಾಲಾ ನಾಯಕಿ ಹಾಗೂ ಎಲ್ಲಾ ವಿದ್ಯಾರ್ಥಿ ಮಂತ್ರಿಗಳಿಗೆ ಹಾಗೂ ವಿರೋಧ ಪಕ್ಷದ ಸದಸ್ಯರುಗಳಿಗೆ ಪ್ರಮಾಣವಚನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ಹಾಗೂ ಎಲ್ಲಾ ಮಂತ್ರಿಗಳ ಕರ್ತವ್ಯಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸಿ ಕೊಟ್ಟರು. ಕಳೆದ ಸಾಲಿನ ವಿದ್ಯಾರ್ಥಿ ಸರಕಾರದಲ್ಲಿದ್ದ ಮಂತ್ರಿಗಳು ಶಾಲಾ ಧ್ವಜ ಹಾಗೂ ಫೈಲನ್ನು ಶಾಲಾ ನಾಯಕಿ ಹಾಗೂ ಶಾಲಾ ನಾಯಕನಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ನಾಯಕಿ ಅನಿಂದ್ರಿತಾ ಹತ್ತನೇ ತರಗತಿ ಹಾಗೂ ಉಪನಾಯಕ ಕೌಶಿಕ ಕುಮಾರ್ ಹತ್ತನೇ ತರಗತಿ, ವಿರೋಧ ಪಕ್ಷದ ನಾಯಕಿ ಚಿನ್ಮಯಿ ಶೆಟ್ಟಿ ಹತ್ತನೇ , ಸ್ಪೀಕರ್ ಆಕಾಶ್ ಹತ್ತನೇ ತರಗತಿ ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
9ನೇ ತರಗತಿ ವಿದ್ಯಾರ್ಥಿನಿ ಹೈನಾ ತಸ್ಮೀನ್ ಸ್ವಾಗತಿಸಿ, 9ನೇ ತರಗತಿಯ ವಿದ್ಯಾರ್ಥಿ ಅಕ್ಷಯ್ ವಂದಿಸಿದರು. 10ನೇ ತರಗತಿಯ ವಿದ್ಯಾರ್ಥಿನಿಗಳಾದ ಮರಿಯಂ ರಿಫಾ ಹಾಗೂ ಲಿತಿಕಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಸೋಜಾ ಸಾಜು , ರೀಟಲತಾ, ದೇವಿಲತ, ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರರು ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದರು.










