ಕೋಲ್ಚಾರು ಕಡೆಯಿಂದ ಸುಳ್ಯಕ್ಕೆ ನಾರ್ಕೋಡು ಮಾರ್ಗವಾಗಿ ಬರುತ್ತಿದ್ದ ಪೆರಾಜೆ ಮೂಲದ ಓಮ್ನಿ ಕಾರಿಗೆ ಬೈಕ್ ಡಿಕ್ಕಿಯಾದ ಘಟನೆ ಜು.1 ರಂದು ಸಂಭವಿಸಿದೆ.
















ಬೈಕ್ ಸವಾರ ರಾಜ ರಂಗತ್ತಮಲೆ ಎಂಬವರು ಸುಳ್ಯದಿಂದ ನಾರ್ಕೋಡು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ನಾರ್ಕೋಡು ಪೇಟೆಯಲ್ಲಿ ಎದುರಿನಿಂದ ಬಂದ ಓಮ್ನಿಯ ಮುಂಭಾಗಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿರುವು ದಾಗಿ ತಿಳಿದು ಬಂದಿದೆ. ಬಳಿಕ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.ಬೈಕ್ ಜಖಂಗೊಂಡಿದೆ.










