ಭಾರತೀಯ ಮಜ್ದೂರ್ ಸಂಘ ಸುಳ್ಯ ತಾಲೂಕು ಇದರ ಸಮಾಲೋಚನಾ ಸಭೆ

0

ಭಾರತೀಯ ಮಜ್ದೂರ್ ಸಂಘ ಸುಳ್ಯ ತಾಲೂಕು ಇದರ ವತಿಯಿಂದ ಹೊಯ್ಗೆ ಮತ್ತು ಕೆಂಪು ಕಲ್ಲಿನ ಪೂರೈಕೆ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿರುವಂತಹ ಕಠಿಣ ಕ್ರಮಗಳ ವಿರುದ್ಧ ತಾಲೂಕಿನ ಎಲ್ಲಾ ಕಾರ್ಮಿಕರು ಸೇರಿ ಜಿಲ್ಲಾಡಳಿತಕ್ಕೆ ಹಾಗೂ ಸಂಸದರಿಗೆ ಹಾಗೂ ಶಾಸಕರಿಗೆ ಅದೇ ರೀತಿ ರಾಜ್ಯ ಸರ್ಕಾರಕ್ಕೆ ಮನವಿ ಕೊಡುವುದರ ಬಗ್ಗೆ ಹಾಗೂ ಹತ್ತು ದಿನಗಳ ಗಡುವು ನೀಡುವುದರ ಬಗ್ಗೆ ಹತ್ತು ದಿನಗಳ ನಂತರ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಮಾಡುವುದರ ಬಗ್ಗೆ ಸಮಾಲೋಚನ ಸಭೆಯು ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಇದರಲ್ಲಿ ಗುತ್ತಿಗೆದಾರರ ಸಂಘದಿಂದ ಸುಭೋಧ್ ಶೆಟ್ಟಿ ಮೇನಾಲ ಹಾಗೂ ಇಂಜಿನಿಯರ್ ಸಂಘದಿಂದ ಕೃಷ್ಣರಾವ್ ಸುಳ್ಯ ಹಾಗೂ ಭಾರತೀಯ ಮಜ್ದೂರ್ ಸಂಘದ ಕಟ್ಟಡ ನಿರ್ಮಾಣ ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷರಾದ ಮಧುಸೂಧನ ಹಾಗೂ ಪ್ರಧಾನ ಕಾರ್ಯದರ್ಶಿ ಅನಿಲ್ ಮಂಡೆಕೋಲು ಸಂಘಟನಾ ಕಾರ್ಯದರ್ಶಿ, ಮನೋಹರ ಹಾಗೂ ಉಪಾಧ್ಯಕ್ಷರಾದ ಲವಕುಮಾರ್ ತಾಲೂಕು ಸಮಿತಿ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮ ಸಮಿತಿಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಕಡೆಯ ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು.