ನಿವೃತ್ತ ಶಿಕ್ಷಕ ದಿ.ಮದುವೆಗದ್ದೆ ಶೇಷಪ್ಪ ಮಾಸ್ತರ್ ರವರ ಶ್ರದ್ಧಾಂಜಲಿ ಸಭೆ – ನುಡಿನಮನ

0

ಶಿಕ್ಷಣ ಪ್ರೇಮಿ , ಆದರ್ಶ ಅಧ್ಯಾಪಕನನ್ನು ಕಳೆದು ಕೊಂಡಿದ್ದೇವೆ : ಕೆ. ಆರ್. ಗಂಗಾಧರ್

ಸುಳ್ಯ ಜೂನಿಯ‌ರ್ ಕಾಲೇಜ್ ನ ಪ್ರೌಢ ಶಾಲಾ ವಿಭಾಗದಲ್ಲಿ ಪದವೀಧರ ಸಹಾಯಕ ಅಧ್ಯಾಪಕರಾಗಿ ನಿವೃತ್ತ ಉಬರಡ್ಕ ಗ್ರಾಮದ ಹಿರಿಯ ನಾಗರಿಕ ಹಾಗೂ ಕೃಷಿಕ ಮದುವೆಗದ್ದೆ ಶೇಷಪ್ಪ ಮಾಸ್ತರ್ ರವರು ಜೂನ್ 16 ರಂದು ನಿಧನರಾಗಿದ್ದು,ವೈಕುಂಠಾಸರಾಧನೆ ,ನುಡಿನಮನ, ಶ್ರದ್ಧಾಂಜಲಿ ಸಭೆಯು , ಜು. 1 ರಂದು ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.

ಮೃತರ ಬಗ್ಗೆ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ಮಾತನಾಡಿ, ಮೃತರು ನನ್ನ ಜೀವನದ ಒಡನಾಡಿ, ಸರಳ ಜೀವನ, ಪ್ರಾಮಾಣಿಕತೆಯ ವ್ಯಕ್ತಿತ್ವ ಮನುಷ್ಯ .ಹಾಗೂ ಅವರು ಬಂದ ದಾರಿಗಳು ಕಷ್ಟಗಳಾಗಿದ್ದರೂ ಇದುವರೆಗೂ ಯಾರಿಗೂ ನೋವಿನಿಂದ ಮಾತನಾಡಿದವರಲ್ಲ. ಅದರಲ್ಲೂ ಶಿಕ್ಷಣ ಪ್ರೇಮಿ ಆಗಿದ್ದರು. ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಶಿಕ್ಷಕನಾಗಿದ್ದರು. ಅದೆಷ್ಟೋ ವಿದ್ಯಾರ್ಥಿಗಳ ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತಿದವರು. ಜೀವನದಲ್ಲಿ ಪ್ರಾಮಾಣಿಕತೆಯಿಂದ ದುಡಿದು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡವರು ಎಂದು ಗುಣಗಾನ ಗೈದರು.

ಮೃತರ ಈ ಸಂದರ್ಭದಲ್ಲಿ ದಿ.
ಮದುವೆಗದ್ದೆ ಶೇಷಪ್ಪ ಮಾಸ್ತರ್ ರವರ ಅನಾರೋಗ್ಯ ಸಂದರ್ಭದಲ್ಲಿ ಸಹಕರಿಸಿದವರನ್ನು ಮನೆಯವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಒಂದು ನಿಮಿಷ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಕುಟುಂಬಸ್ಥರು ಸೇರಿದಂತೆ ಗಣ್ಯ ವ್ಯಕ್ತಿಗಳು ಪುಷ್ಪಾರ್ಚನೆ & ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಗ ಎಂ.ಡಿ ಸುಬ್ರಹ್ಮಣ್ಯ, ಮಗಳು ಗೀತಾ, ಸೊಸೆ ಉಷಾ, ಮೊಮ್ಮಗ ಸೂರ್ಯ , ನಿರ್ಮಲಾ ಕುಮಾರ್ ಚೆನ್ನಯ್ಯನ ಹಳ್ಳಿ , ಸುಂತೋಡು ಜನಾರ್ಧನ ಗೌಡ , ಬಾಲಚಂದ್ರ ಗೌಡ ಎಂ, ಚೆನ್ನ ಕೇಶವ ಜಾಲ್ಸೂರು, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಕೆ.ವಿ ಚಿದಾನಂದ , ಶ್ರೀಮತಿ ಶೋಭಾ ಚಿದಾನಂದ , ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್ ಬಿ ಟೀಂನ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ , ಶ್ರೀಮತಿ ಜ್ಯೋತಿ ಆರ್ ಪ್ರಸಾದ್, ಧನಂಜಯ ಮದುವೆಗದ್ದೆ , ಪಿ.ಸಿ ಜಯರಾಮ , ಚಂದ್ರಾ ಕೋಲ್ಚಾರ್ , ಹರೀಶ್ ಕಂಜಿಪಿಲಿ , ವೆಂಕಟ್ ವಳಲಂಬೆ , ಪಿ.ಎಸ್ ಗಂಗಾಧರ, ಎಂ. ವೆಂಕಪ್ಪ ಗೌಡ , ಎನ್. ಎ ಜ್ಞಾನೇಶ್ , ಡಾ.ಲೀಲಾಧರ್ ಡಿ.ವಿ , ದೇವಸ್ಯ ಭಾಸ್ಕರ್ , ಕೆ.ಆರ್ ಪದ್ಮನಾಭ , ಅಮೈ ಸುರೇಶ್, ಕೇಶವ ಅಡ್ತಲೆ , ಸಂತೋಷ್ ಕುತ್ತ ಮೊಟ್ಟೆ, ದಯಾನಂದ ಕುರುಂಜಿ, ಹಮೀದ್ ಕುತ್ತ ಮೊಟ್ಟೆ, ಪಿ. ಬಿ ಸುಧಾಕರ ರೈ, ಚಂದ್ರ ಶೇಖರ ಪೇರಾಲು
ಬೆಂಗಳೂರು ನಾಮ್ ಧಾರಿ ಸೀಟ್ಸ್ ಸಹದ್ಯೋಗಿಗಳು, ನಿವೃತ್ತ ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ವೃಂದ, ಮೊದಲಾದ ಗಣ್ಯ ವ್ಯಕ್ತಿಗಳು ಸೇರಿದಂತೆ ಅಪಾರ ಬಂಧು ಮಿತ್ರರು ಉಪಸ್ಥಿತರಿದ್ದರು.