ಐವರ್ನಾಡು ಕೆಎಫ್ ಡಿಸಿ ಗೆ ಹೋಗುವ ರಸ್ತೆ ಮೋರಿ ಬ್ಲಾಕ್

0

ರಸ್ತೆಗೆ ಆವರಿಸಿದ ಮಳೆ ನೀರು ಸಾರ್ವಜನಿಕರಿಗೆ ತೊಂದರೆ

ಐವರ್ನಾಡಿನ ಮುಖ್ಯ ರಸ್ತೆ ಜೂನಿಯರ್ ಕಾಲೇಜು ಎದುರು ಕೆಎಫ್ ಡಿಸಿ ಗೆ ಹೋಗುವ ರಸ್ತೆ ಬದಿ ಮೋರಿಯೊಂದು ಬ್ಲಾಕ್ ಆಗಿದ್ದು ಮಳೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ.
ರಸ್ತೆಯಲ್ಲಿ ಹರಿದ ಮಳೆನೀರು ಕಾಲೇಜಿನ ಮೈದಾನಕ್ಕೆ ಹರಿಯುತ್ತಿದ್ದು ಇದರಿಂದ ಸಮಸ್ಯೆಯಾಗಿದೆ.
ಇತ್ತೀಚೆಗೆ ರಸ್ತೆಗೆ ಹೊಸ ಡಾಮರೀಕರಣವಾಗಿದ್ದು ಡಾಮರು ರಸ್ತೆ ಕೊಚ್ಚಿಹೋಗುವ ಸಂಭವ ಕೂಡ ಇದ್ದು ಸಂಬಂಧಪಟ್ಟವರು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾರತವಜನಿಕರು ವಿನಂತಿಸಿದ್ದಾರೆ.