ಜೀವ ಬೆದರಿಕೆ ಆರೋಪದಡಿ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿಗಳು ಆರೋಪದಿಂದ ಮುಕ್ತರಾಗಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕು ಕೊಳ್ತಿಗೆ ಗ್ರಾಮದ ನಿವಾಸಿಗಳಾದ ಉದಯ ಪ್ರಕಾಶ್, ಶಿವರಾಮ ಗೌಡ, ನಾಗಪ್ಪ ಗೌಡ, ತಾರಾನಾಥ ಗೌಡ 2019 ಮಾರ್ಚ್ 29 ರಂದು ಜೀವ ಬೆದರಿಕೆ ಒಡ್ಡಿರುವುದಾಗಿ ಚಂದ್ರಶೇಖರ ಸಿ.ಡಿ. ಬಿನ್. ದಿ|ಪಿ.ಕೆ. ದೇರಣ್ಣ ಗೌಡ, ಚಾಳೆಪಡ್ಡು ಮನೆ,ಕೊಳ್ತಿಗೆ ಗ್ರಾಮ ಪುತ್ತೂರು ಇವರು ದೂರು ನೀಡಿದ್ದರು.
ದೂರಿನ ಮೇರೆಗೆ ಆಗಿನ ಬೆಳ್ಳಾರೆ ಪೋಲೀಸ್ ಉಪ ನಿರೀಕ್ಷಕರಾದ ಡಿ ಎನ್ ಈರಯ್ಯ ರವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತ ಕಲಂ 323, 324, 504, 506 ರಡಿಯಲ್ಲಿ ಕೇಸು ದಾಖಲಿಸಿ ಸುಳ್ಯ ಕಿರಿಯ ನ್ಯಾಯಾಲಯದ ಕ್ರಿಮಿನಲ್ ವ್ಯಾಜ್ಯ ಸಂಖ್ಯೆ: 130/2020 ರಲ್ಲಿ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.















ಸುಳ್ಯ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ನಡೆದಿದ್ದು, ಆರೋಪಿಗಳ ವಿರುದ್ಧವಾಗಿ ಸರಕಾರಿ ಅಭಿಯೋಜಕರು ಸಲ್ಲಿಸಿದ ಸಾಕ್ಷಿಯು ವಿಫಲವಾಗಿದೆ ಎಂದು ತೀರ್ಮಾನಿಸಿ ಸುಳ್ಯದ ಕಿರಿಯ ನ್ಯಾಯಾಲಯದ ನ್ಯಾಯಾಧೀಶೆ ಕುಮಾರಿ ಅರ್ಪಿತ ರವರು ಆರೋಪಿಗಳನ್ನು ಆರೋಪದಿಂದ ದೋಷಮುಕ್ತಗೊಳಿಸುವಂತೆ ತೀರ್ಪು ನೀಡಿದೆ.
ಆರೋಪಿಯ ಪರವಾಗಿ ಸುಳ್ಯದ ಯುವ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ ಎಲ್, ಚರಣ್ ರಾಜ್ ಕಾಯರ, ಶೈಲಿ ಕೆ ಎನ್ ರವರು ವಾದಿಸಿದರು.










