ದಿ. ನೀರ್ಪಾಡಿ ವಿಶ್ವನಾಥ ಗೌಡರಿಗೆ ಜೆಡಿಎಸ್ ವತಿಯಿಂದ ನುಡಿನಮನ

0

ಸುಳ್ಯ ತಾಲೂಕು ಜನತಾದಳ ಪಕ್ಷದ ವತಿಯಿಂದ ಇತ್ತೀಚೆಗೆ ನಿಧನರಾದ ಪಕ್ಷದ ಹಿರಿಯ ಮುಂದಾಳು ನೀರ್ಪಾಡಿ ವಿಶ್ವನಾಥ ಗೌಡರಿಗೆ ಶ್ರದ್ಧಾಂಜಲಿ ಸಭೆ ಪಕ್ಷದ ಕಚೇರಿಯಲ್ಲಿ ಜು.5ರಂದು‌ ನಡೆಯಿತು.
ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಹಾಗೂ ಜಿಲ್ಲಾ ಉಪಾಧ್ಯಕ್ಷ ದಯಾಕರ ಆಳ್ವ ನುಡಿನಮನ ಸಲ್ಲಿಸಿದರು.
ಪಕ್ಷದ ಎಸ್ಸಿ‌ ಎಸ್ಟಿ ಘಟಕದ ಅಧ್ಯಕ್ಷ ಎಂ.ಬಿ.ಚೋಮ, ಪ್ರಮುಖರಾದ ರೋಹನ್ ಪೀಟರ್, ರಾಮಚಂದ್ರ ಬಳ್ಳಡ್ಕ, ನಿಹಾಲ್ ಕೋಡ್ತುಗುಳಿ ಉಪಸ್ಥಿತರಿದ್ದರು. ಪಕ್ಷದ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿ, ವಂದಿಸಿದರು.