ಸಮರವೀರ ಕೆದoಬಾಡಿ ರಾಮಯ್ಯ ಗೌಡರ ವೀರ ಮರಣದ ಇತಿಹಾಸ ಮುಂದಿನ ಪೀಳಿಗೆಗೆ ದೊರಕುವ ದ್ರಷ್ಟಿಯಲ್ಲಿ ಬಾವುಟಗುಡ್ಡೆಯಲ್ಲಿ ಸುಮಾರು 90 ಮೀಟರ್ ಉದ್ದದ, ರಾಜ್ಯದಲ್ಲಿಯೇ ಎರಡನೆಯ ಅತೀ ದೊಡ್ಡ ಧ್ವಜಸ್ತಂಬ ಸ್ಥಾಪಿಸಲು ನಿರ್ಧರಿಸಲಾಗಿದೆ.

ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತುರವರ ಮನವಿಯನ್ನು ಪರಿಗಣಿಸಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ವಿಶೇಷ ಆಸಕ್ತಿ ವಹಿಸಿ ಬಾವುಟ ಗುಡ್ಡೆಯ ಇತಿಹಾಸವನ್ನು ಜಗತ್ತಿಗೆ ಪಸರಿಸುವ ಸಲುವಾಗಿ ಮತ್ತು ದೇಶಕ್ಕಾಗಿ ಸಮರವೀರ ರಾಮಯ್ಯ ಗೌಡರ ತ್ಯಾಗ ಬಲಿದಾನದ ಮುಂದಿನ ಪೀಳಿಗೆಗೆ ಶಾಶ್ವತವಾಗಿರಿಸಲು, ಸ್ಮರಿಸುವ ಸಲುವಾಗಿ ಭಾರತದ ಭವ್ಯ ರಾಷ್ಟ ದ್ವಜ ಆಳವಡಿಸಲು ಯೋಜನೆ ರೂಪಿಸಲಾಗಿದೆ.
ಸುಮಾರು 75 ಲಕ್ಷದ ಅನುದಾನವಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ.