ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಸಭೆ

0

ಸುಳ್ಯ ತಾಲೂಕಿನ ಖ್ಯಾತ ಸಾಹಿತಿಗಳ ಪರಿಚಯಾತ್ಮಕ ಪುಸ್ತಕ ಪ್ರಕಟನೆಗೆ ನಿರ್ಧಾರ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುಳ್ಯ ತಾಲೂಕಿನ ಖ್ಯಾತ ಸಾಹಿತಿಗಳ ಪರಿಚಯಾತ್ಮಕ ಪುಸ್ತಕ ಪ್ರಕಟನೆ ಹಾಗೂ ಪರಿಸರ ಜಾಗೃತಿ ಅಭಿಯಾನ ನಡೆಸಲು ಜು.5 ರಂದು ಸುಳ್ಯ ಕನ್ನಡ ಭವನದಲ್ಲಿ ನಡೆದ ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.


ತಾಲೂಕಿನ ಖ್ಯಾತ ಸಾಹಿತಿಗಳಾದ ಕೊಳಂಬೆ ಪುಟ್ಟಣ್ಣ ಗೌಡ,ಟಿ ಜಿ ಮುಡೂರು, ಕೋಡಿ ಕುಶಾಲಪ್ಪ ಗೌಡ,ಕಿರಣ ಕುತ್ಯಾಳ,ಸುಬ್ರಾಯ ಚೊಕ್ಕಾಡಿ, ಡಾ.ಪ್ರಭಾಕರ ಶಿಶಿಲ,
ಜಯಮ್ಮ ಚಟ್ಟಿಮಾಡ,ಎಂ ಜಿ ಕಾವೇರಮ್ಮ , ನಿರಂಜನ, ಸಾಹಿತ್ಯ ಪೋಷಕರಾದ ಮೀನಾಕ್ಷ್ಮಿ ಗೌಡ, ಡಾ.ಕೆ ವಿ ಚಿದಾನಂದ ಗೌಡ ಅವರ ಬಗ್ಗೆ ಪುಸ್ತಕ ಪ್ರಕಟಣೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಾಹಿತಿಗಳ ಬಗ್ಗೆ ಪುಸ್ತಕ ಬರೆಯುವ ಲೇಖಕರ ಹೆಸರನ್ನು ಕೂಡ ಸಭೆಯಲ್ಲಿ ಘೋಷಿಸಲಾಯಿತು. ಕಸಾಪ ವತಿಯಿಂದ ತಾಲೂಕಿನ 10 ಕಾಲೇಜು ಮತ್ತು ಪ್ರೌಢಶಾಲೆಗಳಲ್ಲಿ ಪರಿಸರ ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಮತ್ತು ಶ್ರೀಮತಿ ಚಂದ್ರಮತಿ,ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ.ಬಾಲಚಂದ್ರ ಗೌಡ, ಪ್ರೊ.ಸಂಜೀವ ಕುದ್ಪಾಜೆ, ಕೇಶವ ಸಿ.ಎ.,ಸ‌ಂಕೀರ್ಣ ಚೊಕ್ಕಾಡಿ, ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ,ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿಭಟ್ ಅಜ್ಜಾವರ, ಯೋಗೀಶ್ ಹೊಸೊಳಿಕೆ, ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಲೇಖಕ ಯಶ್ವಿತ್ ಕಾಳಂಮನೆ ಉಪಸ್ಥಿತರಿದ್ದರು.